ಶ್ರೀರಾಮುಲು ವಿರುದ್ಧ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಮಾಡಿದ ಆರೋಪಗಳೇನು ಗೊತ್ತಾ?

ಬಳ್ಳಾರಿ| Krishnaveni K| Last Modified ಸೋಮವಾರ, 22 ಅಕ್ಟೋಬರ್ 2018 (16:22 IST)
ಬಳ್ಳಾರಿ: ಗಣಿ ದಣಿಗಳ ನಾಡಿನಲ್ಲಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರ ಪ್ರಚಾರ ಮಾಡಿದ ಮಾಜಿ ಸಿಎಂ ಬಿಜೆಪಿ ನಾಯಕ ಬಿ ಶ್ರೀರಾಮುಲು ವಿರುದ್ಧ ಸರಣಿ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ.

ಶ್ರೀರಾಮುಲುಗೆ 371 ಜಿ ಅಂದರೆ ಏನು ಅಂತಲೇ ಗೊತ್ತಿಲ್ಲ. ಅವರಿಗೆ ಗೊತ್ತಿರೋದು 326, 307,323 ಮತ್ತು 420 ಮಾತ್ರ. ಇಂತಹವರಿಗೆ ಮತ ನೀಡಿದರೆ ಕ್ಷೇತ್ರ ಲೂಟಿ ಮಾಡುತ್ತಾರಷ್ಟೆ. ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಅವರ ಕ್ಷೇತ್ರದ ಅಭ್ಯರ್ಥಿಯಾಗಿರುವ ಜೆ ಶಾಂತಾ ಕೂಡಾ ಹಿಂದೆ ಮಾತನಾಡಿದವರಲ್ಲ. ಅಲಂಕಾರಕ್ಕೆ ಇವರನ್ನು ಅಲ್ಲಿಗೆ ಕಳುಹಿಸಬೇಕೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಇಲ್ಲಿ ಸ್ಪರ್ಧಿಸುತ್ತಿರುವ ಉಗ್ರಪ್ಪ ಹೊರಗಿನವರು ಎಂದು ಟೀಕಿಸಿದ ಶ್ರೀರಾಮುಲುಗೆ ತಿರುಗೇಟು ನೀಡಿದ ಅವರು ಹಾಗಿದ್ದರೆ ಹಿಂದೆ ಬಾದಾಮಿಗೆ ಬಂದು ನನ್ನ ವಿರುದ್ಧ ಪ್ರಚಾರ ಮಾಡುವಾಗ ನೀವು ಹೊರಗಿನವರಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಇನ್ನು ಕನ್ನಡ ಪದವನ್ನೇ ಸರಿಯಾಗಿ ಮಾತನಾಡಲು ಬಾರದ ಶ್ರೀರಾಮುಲು ಎಂದಾದರೂ ಲೋಕಸಭೆಯಲ್ಲಿ ಕರ್ನಾಟಕದ ಪರವಾಗಿ ಮಾತನಾಡಿದ್ದಾರೆಯೇ? ಒಂದಾದರೂ ಯೋಜನೆಯನ್ನು ಅವರಿಂದ ಬಳ್ಳಾರಿಗೆ ಬಂದಿದೆಯೇ? ರಾಜ್ಯ ದೇಶ ಗೊತ್ತಿಲ್ಲವದವರು ಲೋಕಸಭೆಗೆ ಏಕೆ ಹೋಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :