ದೀಪಾವಳಿ ಹಬ್ಬಕ್ಕೆ ಹೊಡೆದ ಪಟಾಕಿಗೆ ಸೋಫಾ ತಯಾರಿಕ ಘಟಕ ಭಸ್ಮ

ಬೆಂಗಳೂರು, ಗುರುವಾರ, 8 ನವೆಂಬರ್ 2018 (15:19 IST)


ದೀಪಾವಳಿ ಹಬ್ಬದ ಹಿನ್ನೆಲೆ ಹೊಡೆದ ಪಟಾಕಿಯು ಮೂರನೇ ಮಹಡಿಯ ಸೋಫಾ ಸೆಟ್ ತಯಾರಿಕಾ ಗೋದಾಮಿಗೆ  ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಪಟಾಕಿಯ ಬೆಂಕಿಯ ಕಿಡಿಯಿಂದ ಸಾಕಷ್ಟು ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನಹಳ್ಳಿಯಲ್ಲಿ ನಡೆದಿದೆ. ಇನ್ನು ಈ ಸೋಪಾ ಸೆಟ್ ತಯಾರಿಕಾ ಗೋದಾಮು ಕೇರಳ ಮೂಲದ ಶಾಜಿ ಎನ್ನುವವರಿಗೆ ಸೇರಿದ್ದಾಗಿದ್ದು, ಪಟಾಕಿಯನ್ನು ಹೊಡೆಯುವ ಸಂದರ್ಭದಲ್ಲಿ ಪಟಾಕಿಯ ಕಿಡಿಯು ಮೂರನೇ ಮಹಡಿಯಲ್ಲಿದ್ದ ಸೋಫಾ ಸೆಟ್ ತಯಾರಿಕ ಸಾಮಗ್ರಿಗಳಿಗೆ ತಗುಲಿದೆ.

ಹೀಗಾಗಿ ಬೆಲೆ ಬಾಳುವ ವಸ್ತುಗಳು ಅಗ್ನಿಗೆ ಆಹುತಿಯಾಗಿದ್ದು, ಮೂರು ಅಂತಸ್ತಿನ ಕಟ್ಟಡಕ್ಕೆ ಸಂಪೂರ್ಣ ಬೆಂಕಿ ಅವರಿಸಿದೆ. ಮೂರನೇ ಮಹಡಿಯಲ್ಲಿದ್ದ ನಾಲ್ವರನ್ನು ಸ್ಥಳೀಯರ ಸಹಾಯದಿಂದ  ಹಗ್ಗದ ಮೂಲಕ ರಕ್ಷಣೆ ಮಾಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳಿಂದ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದರು. ಬೆಂಕಿಯು ಹತೋಟಿಗೆ ಬರದೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.  ಈ ಕುರಿತು ಸೂರ್ಯ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ವರ್ಷವು ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ನಿರ್ಧಾರ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ವಿರೋಧದ ನಡುವೆಯೂ ಈ ವರ್ಷವು ಕೂಡ ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ...

news

ಜನಾರ್ಧನ ರೆಡ್ಡಿ ಅವರಿಗೂ ಬಿಜೆಪಿಗೆ ಸಂಬಂಧವಿಲ್ಲ ಎಂದರೆ ಜನ ನಂಬಲ್ಲ- ಮಾಜಿ ಶಾಸಕ ತಿಪ್ಪೇಸ್ವಾಮಿ

ಚಿತ್ರದುರ್ಗ : ಬಿಜೆಪಿಗೂ ಜನಾರ್ಧನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದು, ...

news

ಬಾಲಕಿಯ ಬಾಯಲ್ಲಿ ಪಟಾಕಿ ಸಿಡಿಸಿದ ಭೂಪ; ಬಾಲಕಿ ಸ್ಥಿತಿ ಗಂಭೀರ

ಲಕ್ನೋ : ಯುವಕನೊಬ್ಬ ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಸಿಡಿಸಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ...

news

ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ: ಸಚಿವ ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಆಂಬಿಡೆಂಟ್ ಕಂಪನಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ...