ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 18 ಸ್ಮಗ್ಲರ್​ಗಳ ಬಂಧನ

bangalore| geetha| Last Modified ಸೋಮವಾರ, 11 ಅಕ್ಟೋಬರ್ 2021 (21:46 IST)
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 18 ಸ್ಮಗ್ಲರ್​ಗಳನ್ನು ಬಂಧಿಸಿ ಸುಮಾರು 2.4 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಓರ್ವ ಮತ್ತು ಶಾರ್ಜಾದಿಂದ 17 ಕಳ್ಳಸಾಗಾಣಿಕೆದಾರರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ಭದ್ರತಾ ವಿಭಾಗದಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಗುದದ್ವಾರದಲ್ಲಿ ಮರೆಮಾಚಿ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ಭಾರತದ ಪಾಸ್‌ಪೋರ್ಟ್ ಮೂಲಕ ಗಲ್ಫ್ ದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಮಾರ್ಚ್‌ನಿಂದ ಗಲ್ಫ್ ಮತ್ತು ಬೆಂಗಳೂರು ಮಾರ್ಗದ ಮೂಲಕ ಸಾಕಷ್ಟು ಭಾರಿ ಚಿನ್ನ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇದೀಗ 18 ಸ್ಮಗ್ಲರ್‌ಗಳನ್ನು ಬಂಧಿಸಿದ್ದು,ತನಿಖೆ ಮುಂದುವರೆಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :