ದೇವೇಗೌಡ್ರ ಕುಟುಂಬದ ವಿರುದ್ಧ ಫೈಟ್ ಮಾಡೋಕೆ ಜನರ ಒಲವಿದೆ ಎಂದ ಕಾಂಗ್ರೆಸ್ ನಾಯಕ

ಹಾಸನ, ಶನಿವಾರ, 16 ಮಾರ್ಚ್ 2019 (16:54 IST)

ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಹೋರಾಡಲು ಜನರ ಒಲವಿದೆ ಎಂದು ಹೇಳಿದ್ದಾರೆ.  

ದೇಶದ ಪರವಾಗಿರಬೇಕೆಂದು ಎಲ್ಲರೂ ಮಾತನಾಡಿದ್ದಾರೆ. ಇನ್ನೂ ನಾಲ್ಕು ತಾಲ್ಲೂಕುಗಳ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು. ಈಗ ಸಭೆ ಮಾಡಿದ ಕಡೆಗಳಲ್ಲಿ ನಿಮ್ಮ‌ ತೀರ್ಮಾನದ ಜೊತೆಗಿರ್ತೀವಿ ಎಂದು ಎಲ್ಲರೂ ಹೇಳಿದ್ದಾರೆ. ಹೀಗಂತ ಹಾಸನದಲ್ಲಿ ಎ.ಮಂಜು ಹೇಳಿದ್ದಾರೆ.

ಕುಟುಂಬದ ವಿರುದ್ಧವಾಗಿ ಇರಬೇಕು ಎಂದು ಅಭಿಪ್ರಾಯ ಹೇಳಿದ್ದಾರೆ. ನನ್ನ ನಿರ್ಧಾರಕ್ಕಿಂತ, ಜನರ ನಿರ್ಧಾರದ ಪರವಾಗಿ ನಾನಿರ್ತೀನಿ. ಕಾರ್ಯಕರ್ತರ, ಜನರ ಭಾವನೆಯಂತೆ ನಾನು ಇರ್ತೇನೆ. ನೀವೇನು ತೀರ್ಮಾನ ಮಾಡ್ತೀರೋ ಆ ತೀರ್ಮಾನಕ್ಕೆ ಬದ್ಧ ಎನ್ನೋದು ನಮ್ಮ ಬೆಂಬಲಿಗರ ಅಭಿಪ್ರಾಯವಾಗಿದೆ ಎಂದರು.

ನಾಳೆ ಸಂಜೆ ನಂತರ ನನ್ನ ನಿರ್ಧಾರ ಘೋಷಣೆ ಮಾಡ್ತೇನೆ. ಸೋಮವಾರ ತಮ್ಮ ನಿರ್ಧಾರ ಪ್ರಕಟಿಸೋದಾಗಿ ಎ.ಮಂಜು ತಿಳಿಸಿದ್ರು.

ಇಂದು ಶಾಸಕ ಪ್ರೀತಂ ಗೌಡ ಮನೆಗೆ ಭೇಟಿ ನೀಡಿ ಈ ಹೇಳಿಕೆ ನೀಡಿದ್ರು. ಇದೇ ವೇಳೆ, ಶಾಸಕರ ಮನೆಯಲ್ಲಿ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಎ.ಮಂಜು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್

ಚುನಾವಣೆ ಕಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ...

news

ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆ ಶಿವಕುಮಾರ್ ಹೆಗಲಿಗೆ..?

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕು ಎಂದು ಕಾಂಗ್ರೆಸ್ - ಜೆಡಿಎಸ್ ಪಣ ...

news

ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ ಎಂದ ಲೀಡರ್

ಸರಕಾರದಿಂದಲೇ ಹಗಲು ದರೋಡೆ ನಡೆಯುತ್ತಿದೆ. ಹೀಗಂತ ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಆರೋಪ ಮಾಡಿದ್ದಾರೆ.

news

ಗುಡಿಸಲಿಗೆ ಬಿದ್ದ ಬೆಂಕಿಗೆ ಅಡಿಕೆ ತೋಟ ಸುಟ್ಟಿತು...

ಆಕಸ್ಮಿಕ ಬೆಂಕಿಗೆ ಆರು ಗುಡಿಸಲುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ಅಡಿಕೆ ತೋಟಕ್ಕೂ ಬೆಂಕಿ ...