ತುಮಕೂರು ಮರಳಿ ಪಡೆಯಲು ಕಾಂಗ್ರೆಸ್ ನಾಯಕರ ಯತ್ನ

ತುಮಕೂರು, ಶುಕ್ರವಾರ, 15 ಮಾರ್ಚ್ 2019 (14:10 IST)

ಲೋಕಸಭೆ ಚುನಾವಣೆ ಟಿಕೆಟ್ ಮೈತ್ರಿ ಪೂರ್ಣಗೊಂಡ ಬೆನ್ನಲ್ಲೇ ಕ್ಷೇತ್ರಗಳನ್ನು ಮರಳಿ ಪಡೆಯಲು ಕೈ ಪಡೆಯ ನಾಯಕರು ಪರದಾಡುತ್ತಿದ್ದಾರೆ.

ತುಮಕೂರು ಲೋಕಸಭಾ ಮರಳಿ ಪಡೆಯಲು ಕೈ ನಾಯಕರ ಪರದಾಟ ಮುಂದುವರಿದಿದೆ. ಹಾಲಿ‌‌‌ ಸಂಸದರು ಇರುವ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಮುಖಂಡರು ಯತ್ನ ಮುಂದುವರಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಲು ರಾಜ್ಯ ಕೈ ನಾಯಕರ ಚಿಂತನೆ ನಡೆದಿದೆ.

ತುಮಕೂರು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಹೆಚ್.ಡಿ. ದೇವೇಗೌಡರ ಮನವೊಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ‌ ಒತ್ತಡ ತರುವ ಸಾಧ್ಯತೆಗಳು ಗೋಚರಿಸುತ್ತಿವೆ. ತೆರೆಮರೆಯಲ್ಲಿ ಮೇಲೆ‌ ನಡೆಯುತ್ತಿದೆ ಭಾರಿ ಕಸರತ್ತಿನತ್ತ ಮುಂದಿನ ಚಿತ್ತ ನೆಟ್ಟಿದೆ. ಇದೇ ವಿಚಾರವಾಗಿ ಹೆಚ್.ಡಿ. ದೇವೆಗೌಡರನ್ನ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ಮಾಡಿದ್ದರು.

ಇದು‌ ಹೈಕಮಾಂಡ್ ಹಂತದಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎನ್ನಲಾಗಿದೆ. ತುಮಕೂರು ಕ್ಷೇತ್ರ ಕಾಂಗ್ರೆಸ್ ಗೆ ಬಿಟ್ಟುಕೊಡುವ ವಿಚಾರವಾಗಿ ಹೆಚ್.ಡಿ. ದೇವೇಗೌಡರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಸಭೆ ಚುನಾವಣೆ ಹಿನ್ನೆಲೆ; ಮದ್ಯ ಮಾರಾಟ ಹೊಸ ರೂಲ್ಸ್ ವಿಧಿಸಿದ ಚುನಾವಣಾ ಆಯೋಗ

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮದ್ಯ ಮಾರಾಟಕ್ಕೆ ಕೆಲವು ನಿಯಮಗಳನ್ನು ...

news

ರಾಜಕೀಯ ನಾಯಕರಿಗೆ ಮಂಡ್ಯದ ಜನ, ಮಣ್ಣಿನ ಗುಣದ ಬಗ್ಗೆ ತಿಳಿಸಿದ ಸುಮಲತಾ

ಮಂಡ್ಯ : ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ರಾಜಕೀಯ ನಾಯಕರಿಗೆ ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯ ಜನರ, ...

news

ಕಚೇರಿಯ ಕೆಲಸಕ್ಕೆ ಸೈಕಲ್ ನಲ್ಲಿ ಬಂದ್ರೆ ಈ ದೇಶದಲ್ಲಿ ನೀಡ್ತಾರೆ ಬಂಪರ್ ಆಫರ್

ನೆದರ್ ಲ್ಯಾಂಡ್ : ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ನೆದರ್ಲ್ಯಾಂಡ್ ದೇಶದಲ್ಲಿ ಜನರಿಗೆ ಬಂಪರ್ ...

news

ಫೇಸ್ ಬುಕ್ ಸ್ನೇಹಿತನ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಶಾಕ್ ಆದ ಯುವತಿ. ಕಾರಣವೇನು ಗೊತ್ತಾ?

ಲಂಡನ್ : ಯುವತಿಯೊಬ್ಬಳಿಗೆ ಫೇಸ್ ಬುಕ್ ನಲ್ಲಿ ಪರಿಚಯನಾದ ಹುಡುಗಿಯೊಬ್ಬಳು ಹುಡುಗನ ವೇಷ ಧರಿಸಿ ಆಕೆಯ ...