Widgets Magazine

ಬೈಎಲೆಕ್ಷನ್ ಪ್ರಚಾರ ಮರೆತು ಕೈ ಶಾಸಕರು ಮಹಾರಾಷ್ಟ್ರಕ್ಕೆ ದೌಡು

ಚಿಕ್ಕೋಡಿ| Jagadeesh| Last Modified ಶನಿವಾರ, 4 ಮೇ 2019 (17:35 IST)
ಬೈ ಎಲೆಕ್ಷನ್ ಬಿರುಸಿನ ಪ್ರಚಾರ ಮರೆತು ಕಾಂಗ್ರೆಸ್ ಶಾಸಕರು ಏಕಾಏಕಿಯಾಗಿ ಮಹಾರಾಷ್ಟ್ರಕ್ಕೆ ತೆರಳಿರುವುದು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.

ಕೃಷ್ಣಾ ನದಿಗೆ ನೀರು ಹರಿಸಲು ಕಾಂಗ್ರೆಸ್ ಶಾಸಕರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಹಾರಾಷ್ಟ್ರಕ್ಕೆ ದೌಡಾಯಿಸಿದ್ದಾರೆ.

ನೀರಾವರಿ ಸಚೀವ ಗಿರೀಶ್ ಮಹಾಜನ್ ಅವರನ್ನು ಭೇಟಿಯಾಗಿದ್ದಾರೆ ಕಾಂಗ್ರೆಸ್ ಶಾಸಕರು. ಕಳೆದ ಎರಡು ತಿಂಗಳಿಂದ ಬತ್ತಿದ ಕೃಷ್ಣಾ ನದಿಗೆ ನೀರು ಹರಿಸಲು ಒತ್ತಾಯಿಸಿ ಮಹರಾಷ್ಟ್ರ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಶಾಸಕರು.

ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಭಾಗ, ಅಥಣಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸೇರಿದಂತೆ ಹಲವೆಡೆ ಸಾರ್ವಜನಿಕ ಪರದಾಟ ಹೇಳತೀರದಾಗಿದೆ.

ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೆ ದಿಢೀರ್ ಬೆಳವಣಿಗೆ
ನಡೆದಿದ್ದು, ಕೈ ಶಾಸಕರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :