ಹುಡುಗಿಯರನ್ನ ಇಂಪ್ರೆಸ್ ಮಾಡಲು ಹೋಗಿ ಜೈಲು ಪಾಲಾದರು

ಬೆಳಗಾವಿ| Jagadeesh| Last Updated: ಶನಿವಾರ, 28 ಸೆಪ್ಟಂಬರ್ 2019 (17:50 IST)
ಹುಡುಗಿಯರ ಗೀಳಿಗೆ ಒಳಗಾಗಿದ್ದ ಭೂಪರು ಅವರನ್ನು ಇಂಪ್ರೆಸ್ ಮಾಡಲು ಕಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಡಿಗ್ರಿ ಓದುತ್ತಿದ್ದ ಹಾಗೂ ಒಬ್ಬ ಅಪ್ರಾಪ್ತ ಸೇರಿ ಟಿಕ್ ಟಾಕ್ ಗೀಳು ಅಂಟಿಸಿಕೊಂಡಿದ್ದರು. ಹುಡುಗಿಯರನ್ನು ಇಂಪ್ರೆಸ್ ಮಾಡಲೇಬೇಕೆಂದು ಹಠಕ್ಕೆ ಬಿದ್ದು ಕ್ಯಾಮೆರಾ ಕದ್ದರು. ಆ ಬಳಿಕ ಲ್ಯಾಪಟಾಪ್, ಬೈಕ್ ಮಾಡಿದ್ರು.

ಇನ್ನು, ತಮ್ಮ ಹವಾ ಇನ್ನೂ ಜೋರಾಗಬೇಕೆಂದು ಆರೇಳು ಮನೆಗಳಲ್ಲಿ ನಗ, ನಾಣ್ಯ, ಚಿನ್ನಾಭರಣಗಳನ್ನು ಕದ್ದರು. ಹುಡುಗಿಯರ ಇಂಪ್ರೆಸ್ ಮಾಡಲು ಹೋಗಿ ಕೊನೆಗೆ ಪೊಲೀಸರ ಬಲೆಗೆ ಸಂಪತ್, ಸಂತೋಷ್ ಹಾಗೂ ಅಪ್ರಾಪ್ತ ಬಾಲಕ ಬಿದ್ದಿದ್ದಾರೆ. ಬೆಳಗಾವಿಯಲ್ಲಿ ಈ ಘಟನೆ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :