Widgets Magazine

ಮಟನ್ ಗಾಗಿ ಪತ್ನಿಗೆ ಬೆಂಕಿಯಿಟ್ಟ ಪಾಪಿ ಪತಿ

ಮುಂಬೈ| pavithra| Last Modified ಗುರುವಾರ, 19 ಡಿಸೆಂಬರ್ 2019 (06:47 IST)
ಮುಂಬೈ : ಊಟಕ್ಕೆ ಮಟನ್ ಕಡಿಮೆ ಬಡಿಸಿದಳೆಂದು ಕುಡಿದ ಮತ್ತಿನಲ್ಲಿದ್ದ ಪತಿಯೊಬ್ಬ ತನ್ನ ಪತ್ನಿಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ ಘಟನೆ ಮುಂಬೈ ನ ಜೂಯಿ ಕಾಮೋಥೆಯಲ್ಲಿ ನಡೆದಿದೆ.ಮಾರುತಿ ಸರೋಡ್(38) ಪತ್ನಿಯನ್ನು ಕೊಂದ ಆರೋಪಿ, ಪಲ್ಲವಿ ಸರೋಡ್(37) ಮೃತಪಟ್ಟ ಪತ್ನಿ. ಈ ದಂಪತಿಗೆ ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಾರೆ. ದಿನಗೂಲಿ ಕಾರ್ಮಿಕನಾಗಿದ್ದ ಮಾರುತಿ, ಕುಡಿದು ಮನೆಗೆ ಊಟಕ್ಕೆ ಬಂದಿದ್ದ ವೇಳೆ ಪತ್ನಿ ಮಟನ್ ಕಡಿಮೆ ಬಡಿಸಿದ್ದಾಳೆ ಎಂದು ಕೋಪಗೊಂಡು ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.


ಪತ್ನಿಯ ಹೇಳಿಕೆಯ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :