ನಮ್ಮಮ್ಮನ ಆಣೆ ಎಂದ ಜೆಡಿಎಸ್ ಶಾಸಕ

ತುಮಕೂರು, ಸೋಮವಾರ, 18 ಮಾರ್ಚ್ 2019 (17:52 IST)

ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಆದ್ರೆ ಆಣೆ.. ಹಣೆ ಬರಹದಂತ ಭಾನಾತ್ಮಕ ಮಾತುಗಳು ಚುನಾವಣೆ ಸಂದರ್ಭದಲ್ಲಿ ಈಗ ಬಲವಾಗಿ ಕೇಳಿ ಬರುತ್ತಿವೆ.

ತುಮಕೂರಿನಲ್ಲಿ ಹಾಲಿ ಸಂಸದ ಕಾಂಗ್ರೆಸ್ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಲು ನಮ್ಮಮ್ಮನಾಣೆ  ನಾನು ಕಾರಣ ಅಲ್ಲಾ ಅಂತಾ ಮಾಜಿ ಶಾಸಕ, ಜೆಡಿಎಸ್ ಮುಖಂಡ  ಎಚ್.ನಿಂಗಪ್ಪ ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ತುಮಕೂರಿನ ಪಕ್ಷದ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ನಾನು ಮುದ್ದಹನುಮೇಗೌಡರಿಗೆ ಬೇಡ ಅಂತಾ ಎಲ್ಲೂ ಹೇಳಿಲ್ಲಾ. ಹೇಳೋದೂ ಇಲ್ಲಾ. ನಾನು ಯಾರನ್ನೂ ದ್ವೇಷ ಮಾಡಲ್ಲಾ.

ನಮಗೆ ದೇವರು ಏನಿಟ್ಟಿದ್ದಾನೋ ಯಾರಿಗೆ ಗೊತ್ತು. ಅವರವರ ಯೋಗ ಸಾರ್. ಅದನ್ನ ತಪ್ಪಿಸೋಕೆ ಯಾರಿಂದಲೂ ಆಗೋದಿಲ್ಲಾ. ನಾನು ರಾಜಕೀಯದಲ್ಲಿ ಎಷ್ಟು ಹೋರಾಟ ಮಾಡಿಕೊಂಡು ಬಂದಿದೀನಿ. ಆದ್ರೆ ನಾನು ಮಾಜಿಯಾಗಿದ್ದೀನಿ. ಅದೂ ನನ್ನ ಹಣೆಬರಹ. ಮುದ್ದಹನುಮೇಗೌಡರು 10 ವರ್ಷ ಶಾಸಕರಾಗಿ 5 ವರ್ಷ ಸಂಸದರಾಗಿದ್ದಾರೆ. ಅವರು ಚೆನ್ನಾಗಿಯೇ ಇದ್ದಾರೆ. ಅವರು ಅವರ ಹಣೆ ಬರಹ. ಅವರ ಕಿತ್ತುಕೊಳ್ಳಲು ನನ್ನಿಂದಾಗುತ್ತಾ? ಆದ್ರಿಂದ ನಾನು ಅವರನ್ನ ವಿರೋಧ ಮಾಡಿಲ್ಲಾ. ಮಾಡೋದೂ ಇಲ್ಲಾ ಅಂದ್ರು.

ಯಾರೇ ಅಭ್ಯರ್ಥಿಯಾದ್ರೂ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕೆಲಸ ಮಾಡಬೇಕಿದೆ. ಇದು ಮೈತ್ರಿ ಸರ್ಕಾರದ ಮೈತ್ರಿ ಧರ್ಮ ಪಾಲನೆ ನಮ್ಮೆಲ್ಲ ಕರ್ತವ್ಯ ಅಂದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಶದ ಜನ್ರು ನನ್ನನ್ನು ಎಲೆಕ್ಷನ್ ಗೆ ನಿಲ್ಸಿತ್ತಿದ್ದಾರೆ ಎಂದ ಮಾಜಿ ಪ್ರಧಾನಿ

ನಾನು ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿಲ್ಲ. ಆದರೆ ದೇಶದ ಜನರು ನನ್ನನ್ನ ಚುನಾವಣೆಗೆ ನಿಲ್ಲಿಸಲು ...

news

ದೇಶದ ಸಂವಿಧಾನ ಉಳಿಸುವ ಚುನಾವಣೆ ಯಾವುದು?

ಈ ಚುನಾವಣೆ ದೇಶದ ಸಂವಿಧಾನವನ್ನು ಉಳಿಸುವ ಚುನಾವಣೆಯಾಗಲಿದೆ ಅಂತ ಸಚಿವರೊಬ್ರು ಹೇಳಿದ್ದಾರೆ.

news

ಚುನಾವಣೆಗೆ ಟಿಕೆಟ್ ಸಿಗದ ಹಿನ್ನಲೆ; ಆತ್ಮಹತ್ಯೆಗೆ ಯತ್ನಿಸಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕ

ಹೈದರಾಬಾದ್ : ಚುನಾವಣೆಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕ, ದಲಿತ ನಾಯಕ ...

news

28 ಹಳ್ಳಿಗಳ ಜನರಿಂದ ಎಲೆಕ್ಷನ್ ಬಹಿಷ್ಕಾರ

ರಾಜ್ಯ ಸರ್ಕಾರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು 28 ಹಳ್ಳಿಗಳ ಜನರು ಎಲೆಕ್ಷನ್ ಬಹಿಷ್ಕಾರ ಮಾಡೋದಾಗಿ ...