Widgets Magazine

ತಬ್ಲಿಘಿ ಸಂಪರ್ಕ ಹೊಂದಿದ್ದ ವ್ಯಕ್ತಿ ಸಾವು

ಚಿತ್ರದುರ್ಗ| Jagadeesh| Last Modified ಭಾನುವಾರ, 17 ಮೇ 2020 (18:50 IST)
ತಬ್ಲಿಘಿಗಳನ್ನು ಭೇಟಿ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಕ್ವಾರಂಟೈನ್ ಮಾಡಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ.

ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಜಿಲ್ಲಾಧಿಕಾರಿ ಪ್ರಿಯಾ ವಿನೂತ್ ಸ್ಪಷ್ಟಪಡಿಸಿದ್ದಾರೆ.

ಅಹಮದಾಬಾದ್ ನಿಂದ ಬಂದಿದ್ದ ವ್ಯಕ್ತಿಯು ತಬ್ಲಿಘಿಗಳನ್ನು ಭೇಟಿ ಮಾಡಿದ್ದ ಹಿನ್ನೆಲೆ ಹೊಂದಿದ್ದನು. ಈ ಕಾರಣಕ್ಕಾಗಿ ಮೇ 5ರಂದು ಕ್ವಾರಂಟೈನ್ ಮಾಡಲಾಗಿತ್ತು.

ಮೊದಲ  ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. 14 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿದ್ದ ಅತಿಕ್ ಉರ್ ರೆಹಮಾನ್(78) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಅತಿಕ್ ಉರ್ ರೆಹಮಾನ್.

ಮೃತನ ಅಂತ್ಯ ಸಂಸ್ಕಾರವನ್ನು ಜಿಲ್ಲಾಡಳಿತದ ವತಿಯಿಂದ ನಡೆಸಲಾಗುವುದು ಎಂದು ಪ್ರಿಯಾ ವಿನೂತ್ ಹೇಳಿಕೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :