Widgets Magazine

ಮಾಜಿ ಸ್ಪೀಕರ್ ಗೆ ಅವಮಾನ : ಕಾಂಗ್ರೆಸ್ ನ ಹಿರಿಯ ಮುಖಂಡರು ಅರೆಸ್ಟ್ – ಬಿಗ್ ಡ್ರಾಮಾ

ಮಂಗಳೂರು| Jagadeesh| Last Modified ಶುಕ್ರವಾರ, 20 ಡಿಸೆಂಬರ್ 2019 (16:46 IST)
ರಾಜ್ಯದ ಕಾಂಗ್ರೆಸ್ ನ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರನ್ನು ಬಂಧನ ಮಾಡಿರೋದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳೋದಕ್ಕೆ ಅಂತ ಎಂ.ಬಿ.ಪಾಟೀಲ್, ಬಸವರಾಜ್ ರಾಯರೆಡ್ಡಿ, ಉಗ್ರಪ್ಪ, ಮಾಜಿ ಸ್ಪೀಕರ್ ರಮೇಶ್ ಮೊದಲಾದವರು ತೆರಳಿದ್ದರು.

ಆದರೆ ಬಜ್ಪೆ ಏರ್ ಪೋರ್ಟ್ ನಲ್ಲಿ ಬಿಗ್ ಡ್ರಾಮಾ ನಡೆದಿದ್ದು, ಕಾಂಗ್ರೆಸ್ ಮುಖಂಡರನ್ನು ಬಂಧನ ಮಾಡಲಾಗಿದೆ.

ಬಂದನಕ್ಕೂ ಮೊದಲೇ ವಿರೋಧ ವ್ಯಕ್ತಪಡಿಸಿದ ಕೈ ಪಡೆ ನಾಯಕರು ಹಾಗೂ ಪೊಲೀಸರ ನಡುವೆ ಎಳೆದಾಟ, ತಳ್ಳಾಟ ಭಾರೀ ಪ್ರಮಾಣದಲ್ಲಿ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :