ದಸರಾ ಹಬ್ಬದಂದೇ ದೇವಾಲಯ ಹುಂಡಿಗೆ ಕನ್ನ

ಬೆಂಗಳೂರು| Jagadeesh| Last Modified ಶುಕ್ರವಾರ, 19 ಅಕ್ಟೋಬರ್ 2018 (19:49 IST)
ವಿಜಯದಶಮಿ ಹಬ್ಬದಂದೇ ದೇವಾಲಯದ ಬೀಗ ಒಡೆದು ದೇವಾಲಯದಲ್ಲಿದ್ದಂತಹ ಹುಂಡಿಯನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ದೇವಾಲಯದಲ್ಲಿ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ
ನಡೆದಿದೆ. ನವರಾತ್ರಿಯ ವೇಳೆ ಅಪಾರವಾದ ಹಣ ಹುಂಡಿಯಲ್ಲಿ ಇರುವುದನ್ನು ಅರಿತ ಖದೀಮರು
2 ಗಂಟೆಯ ನಸುಕಿನ ವೇಳೆಯಲ್ಲಿ ಇಬ್ಬರು ಮುಸುಕುಧಾರಿಗಳು ದೇವಾಲಯದ ಬೀಗವನ್ನು ಒಡೆದು ಹುಂಡಿಯನ್ನು ಹೊತ್ತೊಯ್ಯದು
ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹುಂಡಿಯನ್ನು ದೇವಾಲಯದ ಸಮೀಪದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ.

ಇನ್ನು ಎಂದಿನಂತೆ ಬೆಳಗಿನ ಪೂಜೆಗೆ ದೇವಾಲಯಕ್ಕೆ ಅರ್ಚಕರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಬನ್ನೇರುಘಟ್ಟ ಪೊಲೀಸರಿಗೆ ವಿಷಯ ತಿಳಿಸಿ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳ್ಳರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :