ಬೆಂಗಳೂರು : ಇಂದು ಸಿಎಂ ಯಡಿಯೂರಪ್ಪ 2020-21 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಈ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು ಖಾರ ಇರುತ್ತೆ ಆದ್ರೆ ಈ ಬಜೆಟ್ ನಲ್ಲಿ ಖಾರನೂ ಇಲ್ಲ ಶಕ್ತಿಯೂ ಇಲ್ಲ. ಹುರುಪಿನಲ್ಲಿ ಸರ್ಕಾರ ಮಾಡಿದ್ರು, ಅದರಂತೆ ಬಜೆಟ್ ಇಲ್ಲ ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ್ದೇ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ