ಈ ಕಾರಣಕ್ಕೆ ಶಾಸಕರ ಮನೆ ಮುಂದೆ ಅಹೋರಾತ್ರಿ ಕುಳಿತ ಮಂದಿ

ದಾವಣಗೆರೆ| Jagadeesh| Last Modified ಬುಧವಾರ, 14 ಆಗಸ್ಟ್ 2019 (20:13 IST)
ಶಾಸಕರ ಮನೆ ಮುಂಭಾಗದಲ್ಲಿ ಏಕಾಏಕಿಯಾಗಿ ಸಾವಿರಾರು ಜನರು ಜಮಾಯಿಸಿ ಅಹೋರಾತ್ರಿ ಕುಳಿತುಕೊಂಡಿದ್ದರು.

ಆಶ್ರಯ ಮನೆಯ ಯೋಜನೆ ಮನೆಗೆ ಅರ್ಜಿ ತೆಗೆದುಕೊಳ್ಳಲು ಬಂದಿದ್ದರು ಸಾವಿರಾರು ಜನರು. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ‌ನವರ ಮನೆ ಮುಂಭಾಗ ಸಾವಿರಾರು ಜನರು ಜಮಾವಣೆಗೊಂಡಿದ್ದರು.

ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪರ ಮನೆ ಮುಂದೆ ರಾತ್ರಿ 10 ಗಂಟೆಯಿಂದ ಅರ್ಜಿಗಳನ್ನು ಪಡೆಯಲು ಕಾದು ಕುಳಿತಿದ್ದರು ಜನರು. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ.


 
ಇದರಲ್ಲಿ ಇನ್ನಷ್ಟು ಓದಿ :