ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡಿದ ಕಾಂಗ್ರೆಸ್​​ ನಾಯಕರು

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (10:47 IST)

ಬೆಂಗಳೂರು : ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆ ನಗರದ  ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​​ ಮುಖಂಡರು ಸಂಭ್ರಮದಿಂದ ಆಚರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಧ್ವಜಾರೋಹಣ ನೆರವೇರಿಸಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹಲವು ಮುಖಂಡರು ಉಪಸ್ಥತರಿದ್ದರು.


ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ದೇಶದಲ್ಲಿ ಇಂದು ಭಯದ ವಾತಾವರಣ ಇದ್ದು, ಶಾಂತಿ ಬದಲಿಗೆ ವೈಷಮ್ಯ ಬೆಳೆಯುತ್ತಿದೆ. ಕೇಂದ್ರ ಸರ್ಕಾರ ಭಾವಾನಾತ್ಮಕ, ಸುಳ್ಳಿನ ದಾಖಲೆಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ . ಇದರಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಂತಾಗುತ್ತಿದೆ ಎಂದು ಹೇಳಿದ್ದಾರೆ.


ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ ಅಘೋಷಿತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು ಅಧಿಕಾರಕ್ಕೆ ಬಂದರೆ ಹೀಗೆ ಆಗುತ್ತೆ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸಾವಿರಾರು ಜನ ಸ್ವಾರ್ಥವಿಲ್ಲದೇ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಎಲ್ಲರೂ ಜಾತ್ಯಾತೀತ‌ ಮನೋಭಾವವನ್ನ ಬೆಳೆಸಿಕೊಳ್ಳಬೇಕಿದೆ. ಸರ್ವಧರ್ಮವನ್ನ ಗೌರವಿಸಿ ಸಹಬಾಳ್ವೆಯಿಂದ ಬದುಕಬೇಕು ಎಂದು ಹೇಳಿದ್ದಾರೆ.

.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೀರ ಚಕ್ರ ಪ್ರಶಸ್ತಿಗೆ ಭಾಜನರಾದ ವೀರ ಯೋಧ ಅಭಿನಂದನ್​ ವರ್ತಮಾನ್

ನವದೆಹಲಿ : ಪುಲ್ವಾಮ ದಾಳಿಯ ವೇಳೆ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ವಾಯುಪಡೆ ವಿಂಗ್​ ...

news

ಇಂದು 73 ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಬಿಎಸ್ ವೈ ಹೇಳಿದ್ದೇನು?

ಬೆಂಗಳೂರು : 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನಲೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ...

news

ರಕ್ಷಾ ಬಂಧನದಂದು ಗೋವುಗಳಿಗೆ ರಾಖಿ ಕಟ್ಟುವೆ- ಬಿಜೆಪಿ ಶಾಸಕ ಭುಕ್ಕಲ್‌ ನವಾಬ್‌ ಘೋಷಣೆ

ಲಕ್ನೋ : ಸಾಮಾನ್ಯವಾಗಿ ರಕ್ಷಾಬಂಧನ ದಿನದಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಆದರೆ ಉತ್ತರ ...

news

ಟಾರ್ಗೆಟ್ ರೀಚ್ ಆಗದ ಸಿಬ್ಬಂದಿಗಳಿಗೆ ಮೀನು, ಕೋಳಿ ರಕ್ತ ಸೇವಿಸುವ ಶಿಕ್ಷೆ ನೀಡಿದ ಚೀನಾ ಕಂಪೆನಿ

ಚೀನಾ : ಚೀನಾದ ಕಂಪೆನಿಯೊಂದು ಟಾರ್ಗೆಟ್ ರೀಚ್ ಆಗದ ತಮ್ಮ ಕೆಲಸದ ಸಿಬ್ಬಂದಿಗಳಿಗೆ ನೀಡಿದ ಶಿಕ್ಷೆಯ ಬಗ್ಗೆ ...