ರಮೇಶ್ ಜಾರಕಿಹೊಳಿಯಿಂದ ಮತ್ತೆ ಮುಂಬೈ ಪಾಲಿಟಿಕ್ಸ್

ಬೆಳಗಾವಿ| Krishnaveni K| Last Modified ಸೋಮವಾರ, 21 ಜೂನ್ 2021 (10:42 IST)
ಬೆಳಗಾವಿ: ರಾಸಲೀಲೆ ಪ್ರಕರಣದಲ್ಲಿ ತಮ್ಮನ್ನು ಯಾರೂ ಬೆಂಬಲಿಸದೇ ಇರುವ ಕಾರಣಕ್ಕೆ ಮತ್ತು ಮತ್ತೆ ತಮಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಾರೂ ಪರಿಗಣಿಸದೇ ಇರುವುದಕ್ಕೆ ನೊಂದಿರುವ ಶಾಸಕ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.  
> ಕಳೆದ ಬಾರಿ ಮುಂಬೈಗೆ ತೆರಳಿ ತಮ್ಮ ಆಪ್ತ ಶಾಸಕರನ್ನು ಕರೆಸಿಕೊಂಡು ರಾಜೀನಾಮೆ ಕೊಡಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಲು ಅವರೇ ಪ್ರಮುಖ ಕಾರಣರಾಗಿದ್ದರು. ಇದೀಗ ಮತ್ತೆ ಅಸಮಾಧಾನಗೊಂಡು ಮುಂಬೈಗೆ ತೆರಳಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.>   ತಮ್ಮ ವಿರುದ್ಧ ಬಂದಿರುವ ಪ್ರಕರಣ ರದ್ದುಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಪಡುತ್ತಿಲ್ಲ. ಅಲ್ಲದೆ, ತಮಗೆ ಮತ್ತೆ ಸಚಿವ ಸ್ಥಾನ ಕೊಡುವ ಬಗ್ಗೆಯೂ ಆಸಕ್ತಿ ತೋರುತ್ತಿಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :