ಬಾಲಕಿ ಮೇಲೆ ಮನೆ ಮಾಲೀಕ ಮಾಡಿದ್ದೇನು!

ಕಾರ್ಕಳ, ಬುಧವಾರ, 20 ಫೆಬ್ರವರಿ 2019 (17:10 IST)

ಮನೆ ಮಾಲೀಕನೊಬ್ಬ 5 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎಸಗಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬಾಡಿಗೆ ಮನೆಯಲ್ಲಿ ಹೆತ್ತವರ ಜೊತೆ ವಾಸವಾಗಿದ್ದ ಅಪ್ರಾಪ್ತ ಬಾಲಕಿಗೆ ಮನೆಯ ಮಾಲಕನೇ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಜೋಡುರಸ್ತೆ ಕಾರಲ್ಗುಡ್ಡೆ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲಿಕ ಸ್ಥಳೀಯ ನಿವಾಸಿ ಸಂತೋಷ್.ಕೆ ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಸಂತೋಷ್ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದು, ಅವರ 5 ವರ್ಷ ಪ್ರಾಯದ ಬಾಲಕಿ ಮೇಲೆ ಈತ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕಳೆದ ಒಂದೂವರೆ ತಿಂಗಳಿನಿಂದ ಆರೋಪಿ ಬಾಲಕಿಯ ಗುಪ್ತಾಂಗಕ್ಕೆ ಕೈಹಾಕುವ ಮೂಲಕ ಗಾಯಗೊಳಿಸಿದ್ದ ಮತ್ತು ಬೇರೆ ಬೇರೆ ರೀತಿಯಲ್ಲಿ ಬಾಲಕಿಯ ಜೊತೆ ವಿಕೃತಿ ಮೆರೆದಿದ್ದ ಎನ್ನಲಾಗಿದೆ.

ಮನೆಯಲ್ಲಿ ಮಗುವಿಗೆ ಸ್ನಾನ ಮಾಡಿಸುವ ವೇಳೆ ಪೋಷಕರು ಗಾಯದ ಬಗ್ಗೆ ವಿಚಾರಿಸಿದಾಗ ಆರೋಪಿಯ ಹೇಯಕೃತ್ಯ ಬೆಳಕಿಗೆ ಬಂದಿದೆ. ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೈಟ್ ಆಸೆಗೆ ನಾದಿನಿಯನ್ನೇ ಕೊಂದ ಭೂಪ ಅರೆಸ್ಟ್

ಸೈಟ್ ಆಸೆಗಾಗಿ ನಾದಿನಿಯನ್ನೇ ಕೊಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಲಾಗಿದೆ.

news

ಸೇವಾ ಪುಸ್ತಕ ಕದ್ದ ಶಿಕ್ಷಕ ಸೆರೆಯಾಗಿದ್ದು ಹೇಗೆ ಗೊತ್ತಾ?

ಶಿಕ್ಷಕನೊಬ್ಬನ ಸೇವಾ ಎಸ್ಸಾರ್‌ ಪುಸ್ತಕವನ್ನು ಇನ್ನೋರ್ವ ಶಿಕ್ಷಕ ಕದ್ದು ಹರಿದಿರುವ ಘಟನೆ ನಡೆದಿದೆ.

news

ಯಲ್ಲಮ್ಮನ ಜಾತ್ರೆಯಲ್ಲಿ ಎಗ್ಗಿಲ್ಲದೇ ನಡೆಯಿತು ಜೂಜು

ಹಾಡು ಹಗಲಲ್ಲೇ ಜೂಜು ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

news

ಬೆನ್ನಿಗೆ ಚೂರಿ ಹಾಕಿಲ್ಲ ಎಂದು ತಿರುಗೇಟು ನೀಡಿದ ಶಾಸಕ!

ದಿನೇಶ್ ಗುಂಡುರಾವ್ ಹೇಳಿಕೆಗೆ ಅಥಣಿ ಶಾಸಕ ತಿರುಗೇಟು ನೀಡಿದ್ದಾರೆ.