ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಭಾವನಿಗೆ ಭಾಮೈದ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಬುಧವಾರ, 30 ಜನವರಿ 2019 (11:13 IST)

ಬೆಂಗಳೂರು : ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಬಾಮೈದನೊಬ್ಬ ತನ್ನ ಬಾವನ ಕೈ ಬೆರಳು ಕಟ್ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.


ಅಮ್ಜದ್ ಈ ಕೃತ್ಯ ಎಸಗಿದ ಆರೋಪಿ, ಶಫೀ ಹಲ್ಲೆಗೊಳಗಾದ ಭಾವ. ಕಾರ್ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಶಫೀ ಕಳೆದೊಂದು ವಾರದಿಂದ ಹೊಟ್ಟೆ ನೋವಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲಿದ್ದರೂ ಕೂಡ ಆತನ ಪತ್ನಿ ನೀಲೂಫರ್ ತನ್ನ ಪತಿಯ ಆರೋಗ್ಯವನ್ನು ವಿಚಾರಿಸಲಿಲ್ಲ. ಈ ಬಗ್ಗೆ ಶಫೀ ತನ್ನ ಪತ್ನಿಯನ್ನು ಪ್ರಶ್ನಿಸಿದ್ದಕ್ಕೆ ದಂಪತಿಗಳ ನಡುವೆ ಜಗಳ ನಡೆದಿದೆ.  


ಜಗಳವಾದ ಬಳಿಕ ಸಂಜೆ ನೀಲೂಫರ್ ಸಹೋದರ ಅಶೂ ತನ್ನ ಮಾವಂದಿರ ಜೊತೆ ಬಂದು ಶಫೀಯ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಬಲಗೈನ ಕೈ ಬೆರಳುಗಳನ್ನ ಕಟ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಾಳು ಶಫೀಯನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ದೇವೇಗೌಡರಿಗೆ ಕಾಂಗ್ರೆಸಿಗರಿಂದ ಎದುರಾಗಿದೆ ಸಂಕಷ್ಟ

ಹಾಸನ : ಲೋಕಸಭಾ ಚುನಾವಣೆಗೆ ಮೈತ್ರಿ ಘೋಷಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳನ್ನು ...

news

ಮದ್ಯ ನಿಷೇಧಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಮುಂದಾದ ಮಹಿಳೆಯರು

ಬೆಂಗಳೂರು : ಮದ್ಯ ನಿಷೇಧ ಮಾಡಬೇಕೆಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಇಂದು ಬೆಳಗ್ಗೆ 11 ಗಂಟೆಗೆ ...

news

ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಹಾಸ್ಯಾಸ್ಪದ ಎಂದು ಟೀಕಿಸಿದ ಮಾಯಾವತಿ

ಲಖನೌ : ಬಡತನ ನಿರ್ಮೂಲನೆ ಮಾಡಲು ಪ್ರತಿಯೊಬ್ಬರಿಗೆ ಕನಿಷ್ಠ ವೇತನ ನೀಡಲಾಗುವುದು ಎಂಬ ರಾಹುಲ್‌ ಗಾಂಧಿ ...

news

ಯೋಗೇಶ್ವರ್ ತೆಕ್ಕೆಯಲ್ಲಿದ್ದಾರಾ ಕಂಪ್ಲಿ ಶಾಸಕ ಗಣೇಶ್?

ಬೆಂಗಳೂರು : ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆಮೆರೆಸಿಕೊಂಡಿರುವ ಕಂಪ್ಲಿ ...