ಮಾರಿ ಹಬ್ಬದಲ್ಲಿನ ಕುಣಿತ ನೋಡಿದಿರಾ?

ಚಾಮರಾಜನಗರ| Jagadeesh| Last Modified ಮಂಗಳವಾರ, 30 ಏಪ್ರಿಲ್ 2019 (18:19 IST)
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸಂಪರ್ಕದ ಕೊಂಡಿಯಂತಿರುವ ಗಡಿ ಜಿಲ್ಲೆಯಲ್ಲಿ ಮಾರಿ ಹಬ್ಬದ ಮನೆ ಮಾಡಿದೆ.

ಚಾಮರಾಜನಗರ ಜಿಲ್ಲೆಯ ಗಡಿ ಪ್ರದೇಶ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೀಗ ಮಾರಿ ಹಬ್ಬದ ಸಡಗರ ಕಳೆಗಟ್ಟಿದೆ.
ಕೊಳ್ಳೆಗಾಲ ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಾರಿಹಬ್ಬದ ಪ್ರಯುಕ್ತ ನಡೆದ ಮಾದಪ್ಪನ ಭಕ್ತರ ಒನಕೆ ನೃತ್ಯ ಗಮನ ಸೆಳೆಯಿತು.

ನೂರಾರು ಭಕ್ತರು ಒನಕೆ ಹಿಡಿದು, ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಹರಕೆ ಹೊತ್ತ ಭಕ್ತರು ಒನಕೆ ನೃತ್ಯ ಮಾಡುವ ಮೂಲಕ ಮಾರಿಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಿದರು.


 
ಇದರಲ್ಲಿ ಇನ್ನಷ್ಟು ಓದಿ :