ರಾಜೀನಾಮೆ ಸ್ವೀಕರಿಸೋ ಬಗ್ಗೆ ಯಾಕೆ ಇಷ್ಟೊಂದು ಅರ್ಜೆಂಟ್?- ಬಿಜೆಪಿಗೆ ಟಾಂಗ್ ಕೊಟ್ಟ ಸ್ಪೀಕರ್

ಬೆಂಗಳೂರು, ಗುರುವಾರ, 11 ಜುಲೈ 2019 (10:28 IST)

ಬೆಂಗಳೂರು : ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಬಿಜೆಪಿಯವರು ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿ ಇದೀಗ ಬಿಜೆಪಿ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಟಾಂ‍ಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸ್ವೀಕರಿಸೋ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟೊಂದು ಅರ್ಜೆಂಟ್ ..? ಶಾಸಕರ ರಾಜೀನಾಮೆ ವಿಚಾರದಲ್ಲಿ ತಿಂಗಳುಗಟ್ಟಲೆ ಕಳೆದಿರೋದು ಇದೆ. ತಿಂಗಳುಗಳ ಕಾಲ ರಾಜೀನಾಮೆ ಅಂಗೀಕಾರವಾಗದಿರೋ ಉದಾಹರಣೆ ಇದೆ. ಆದರೆ ಒಂದೇ ವಾರದಲ್ಲಿ  ಇವರಿಗೆ ಯಾಕೆ ಇಷ್ಟೊಂದು ಅರ್ಜೆಂಟ್..? ಎಂದು ಪ್ರಶ್ನಿಸಿದ್ದಾರೆ.


ಒಂದು ವಾರ ವಿಳಂಬದಿಂದ ತುರ್ತಾಗಿ ಆಗಬೇಕಿರೋ ಕೆಲಸವಾದ್ರೂ ಏನು? ಜನಸಾಮಾನ್ಯರು ಅವರ ಪಾಡಿಗೆ ಇದ್ದಾರಲ್ಲವೇ? ನಾನು ಕುಟುಂಬದೊಂದಿಗೆ ಇದ್ದೇನೆ. ಖಾಸಗಿ ಮನೆಯಲ್ಲಿ ಯಾವುದೇ ವ್ಯವಹಾರ ಮಾಡಿಲ್ಲ. ಸಂಪ್ರದಾಯದ ಪ್ರಕಾರ ನನ್ನನ್ನು ವಿಧಾನಸೌಧದಲ್ಲಿ ಭೇಟಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮ್ಮಿಶ್ರ ಸರ್ಕಾರಕ್ಕೆ ಇಂದು ಕ್ಲೈಮ್ಯಾಕ್ಸ್

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಹಸನಗಳಿಂದಾಗಿ ರಾಜಕೀಯ ಹೈ ಡ್ರಾಮಾಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ...

news

ಸ್ಪೀಕರ್ ವಿರುದ್ಧ ರೆಬಲ್ ಶಾಸಕರು ಫುಲ್ ಗರಂ: ಸುಪ್ರೀಂಗೆ ಮೊರೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಇದೀಗ ಸ್ಪೀಕರ್ ವಿರುದ್ಧ ಫುಲ್ ಗರಂ ಆಗಿದ್ದು, ...

news

ಹೈವೋಲ್ಟೇಜ್ ಪಂದ್ಯ - ಟೀಂ ಇಂಡಿಯಾ ಗೆಲ್ಲಲು 40 ಬಾಲ್ ಗಳಲ್ಲಿ 70 ರನ್ ಬೇಕು

ಹೈವೋಲ್ಟೇಜ್ ಕುತೂಹಲ ಸೃಷ್ಟಿಮಾಡಿರುವ ನ್ಯೂಜಿಲೆಂಡ್ – ಇಂಡಿಯಾ ಪಂದ್ಯ

news

ವಿಧಾನ ಮಂಡಲ ಅಧಿವೇಶನ ನಡಯೋದೇ ಇಲ್ಲ ಎಂದ ಯಡಿಯೂರಪ್ಪ

ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯೋ ಪ್ರಶ್ನೆಯೇ ...