ಹಬ್ಬದ ದಿನದಂದೇ ಇಡೀ ಕುಟುಂಬ ಸಾವಿಗೆ ಶರಣಾದದ್ದಾದ್ರು ಯಾಕೆ?

ಬೆಂಗಳೂರು| Ramya kosira|
ಬೆಂಗಳೂರು :
ದೀಪಾವಳಿ ಹಬ್ಬದ ದಿನದಂದೇ ರಾಜ್ಯದಲ್ಲಿ ಐದು ಮಂದಿ ಆತ್ಮಹತ್ಯೆಗೆ ಶರಣಾದರೆ, ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹೌದು, ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಸಾವಿಗೆ ಶರಣಾದ ಘಟನೆ ಬುಧವಾರ ನಡೆದಿದೆ.
ಗ್ರಾಮದ ಮಲ್ಲಪ್ಪ ಗೋವಿಂದಪ್ಪ ಗಡಾದ್(26), ಸುಧಾ ಮಲ್ಲಪ್ಪ ಗಡಾದ್(22) ಹಾಗೂ 4 ತಿಂಗಳ ಮಗು ಮೃತರು. ಗ್ರಾಮದ ತಮ್ಮ ಜಮೀನಿನಲ್ಲಿರುವ ಮನೆ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದು ಮಲ್ಲಪ್ಪ ಗಡಾದ್ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು, ಪತ್ನಿ ಹಾಗೂ ಮಗು ಶವ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದು, ಪೊಲೀಸ್ ತನಿಖೆಯಿಂದಲೇ ಘಟನೆ ವಿವರ ಹೊರಬರಬೇಕಿದೆ. ಸದ್ಯಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಹೇಳಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :