ಶವ ಸಂಸ್ಕಾರಕ್ಕೆ ಬಂದವರು ಸಿಟಿ ರವಿ ವಿರುದ್ಧ ಕಿಡಿಕಾರಿದ್ದೇಕೆ?

ಬೆಂಗಳೂರು| pavithra| Last Modified ಗುರುವಾರ, 22 ಏಪ್ರಿಲ್ 2021 (11:40 IST)
ಬೆಂಗಳೂರು : ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಶವಸಂಸ್ಕಾರಕ್ಕೆ ಕಾಯುತ್ತಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಮನಹಳ್ಳಿ ಚಿತಾಗಾರದಲ್ಲಿ ನಡೆದಿದೆ.
ಸಿಟಿ ರವಿ ಆಪ್ತರೊಬ್ಬರು  ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಅವರ ಶವಸಂಸ್ಕಾರ ಮಾಡಲು ಸಮನಹಳ್ಳಿ ಚಿತಾಗಾರಕ್ಕೆ ಮೃತದೇಹವನ್ನು ತರಲಾಗಿದೆ. ಆದರೆ ಈಗಾಗಲೇ ಶವಗಾರದಲ್ಲಿ ಶವಸಂಸ್ಕಾರ ಮಾಡಲು ಹಲವು ಜನರು ತುಂಬಾ ಸಮಯದಿಂದ ಕಾಯುತ್ತಿದ್ದರು.> > ಆದರೆ ಸಿಟಿ ರವಿ ಆಪ್ತನ ಬಂದ ಹಿನ್ನಲೆಯಲ್ಲಿ  ಆಪ್ತನ ಶವಸಂಸ್ಕಾರಕ್ಕೆ ಮೊದಲ ಅವಕಾಶ ನೀಡಲಾಗಿದೆ. ಈ ಹಿನ್ನಲೆ ಬೆಳಿಗ್ಗೆಯಿಂದ ಶವಸಂಸ್ಕಾರಕ್ಕೆ ಕಾದಿದ್ದವರು ಸಿಟಿ ರವಿ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :