ಗಣೇಶ ಹಬ್ಬಕ್ಕೆ ತವರಿಗೆ ಹೋದ ಪತ್ನಿ: ಮಚ್ಚಿನೇಟು ಹಾಕಿದ ಗಂಡ

ಬೆಂಗಳೂರು| Jagadeesh| Last Modified ಸೋಮವಾರ, 2 ಸೆಪ್ಟಂಬರ್ 2019 (21:00 IST)
ಬೇಡಾ ಬೇಡಾ ಅಂದರೂ ಆತನ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ. ಮುಗಿಸಿಕೊಂಡು ಬರೋಕೆ ಅಂತ ಹೋದ ಪತ್ನಿಯ ವರ್ತನೆಯಿಂದ ರೋಸಿ ಹೋದ ಗಂಡ ಮಾಡಬಾರದ ಕೆಲಸ ಮಾಡಿದ್ದಾನೆ.

ಆರೋಪಿ ಲೋಹಿತ್ ಹಾಗೂ ಆತನ ಹೆಂಡತಿಯ ತಮ್ಮ ಹಾಗೂ ಅತ್ತೆಗೆ ಅಷ್ಟಕ್ಕಷ್ಟೇ ಸಂಬಂಧವಿತ್ತು. ಆದರೆ ತವರು ಮನೆ ಪ್ರೀತಿಯಿಂದಾಗಿ ಲೋಹಿತ್ ನ ಪತ್ನಿ ಗಣೇಶ ಹಬ್ಬಕ್ಕಾಗಿ ತವರು ಮನೆ ಸೇರಿದ್ದಾಳೆ.

ಇದರಿಂದ ಕೆರಳಿದ ಲೋಹಿತ್, ಪತ್ನಿ ಮನೆ ಮುಂದೆ ಬಂದು ರೇಗಾಡಿದ್ದಾನೆ. ಆಗ ವಾಗ್ವಾದ ನಡೆದಾಗ ಅಲ್ಲೇ ಇದ್ದ ಮಚ್ಚನ್ನು ತೆಗೆದುಕೊಂಡ ಲೋಹಿತ್, ತನ್ನ ಅತ್ತೆ ಹಾಗೂ ಭಾಮೈದನ ಮೇಲೆ ಬೀಸಿ ಹಲ್ಲೆ ನಡೆಸಿದ್ದಾನೆ.

ಬೆಂಗಳೂರಿನ ಎಂಇಐ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :