Widgets Magazine

ಮದ್ಯ ನಿಷೇಧಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಮುಂದಾದ ಮಹಿಳೆಯರು

ಬೆಂಗಳೂರು| pavithra| Last Modified ಬುಧವಾರ, 30 ಜನವರಿ 2019 (11:06 IST)
ಬೆಂಗಳೂರು : ಮದ್ಯ ನಿಷೇಧ ಮಾಡಬೇಕೆಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಚಿತ್ರದುರ್ಗದಿಂದ ಜನವರಿ 19ರಂದು ಕಾಲ್ನಡಿಗೆ ಮೂಲಕ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಹಿಳೆಯರು ಮಂಗಳವಾರ ಮಧ್ಯಾಹ್ನ ರಾಜ್ಯ ರಾಜಧಾನಿಗೆ ತಲುಪಿದ್ದಾರೆ. ಸದ್ಯ ಮಲ್ಲೇಶ್ವರಂನ ಗ್ರೌಂಡ್‍ನಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯರು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.


ಗಂಡಸರು ಮದ್ಯದ ಸಹವಾಸ ಮಾಡಿ ಅವರ ಹೆಂಡ್ತಿ ಮಕ್ಕಳು ಹಾಗೂ ಮನೆ ಮಂದಿ ಉಪವಾಸವಿರುವಂತಾಗಿದೆ. ಈ ಮದ್ಯದಿಂದ ಚಿಕ್ಕಮಕ್ಕಳ ಜೀವನವೂ ಹಾಳುಗುತ್ತಿದೆ ಎಂದು ಮಹಿಳೆಯರು ಈ ಮದ್ಯವನ್ನು ನಿಷೇಧ ಮಾಡಬೇಕೆಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮದ ದಿನವೇ ಮದ್ಯ ನಿಷೇಧ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ತಮ್ಮ ಪ್ರತಿಭಟನೆಗೆ ಗೆಲುವು ಸಿಗುವ ತನಕ ನಾವು ಅಲ್ಲಿದ್ದ ಕದಲುವುದಿಲ್ಲ ಎಂದು ತಿಳಿಸದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :