ಅಯ್ಯಪ್ಪನ ದರ್ಶನಕ್ಕೆ ಹೊರಟ ಮಹಿಳೆಯರು: ಮುಂದುವರಿದ ಸಂಘರ್ಷ

ಬೆಂಗಳೂರು| Jagadeesh| Last Modified ಶುಕ್ರವಾರ, 19 ಅಕ್ಟೋಬರ್ 2018 (22:37 IST)
ಪ್ರಸಿದ್ಧವಾಗಿರುವ ಧಾರ್ಮಿಕ ಕ್ಷೇತ್ರ ಶಬರಿಮಲೈಗೆ ಮಹಿಳಾ ಭಕ್ತರ ಪ್ರವೇಶ ಮಾಡುವುದಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಸಂಘರ್ಷ ಮುಂದುವರಿದಿದೆ.

ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಯತ್ನಿಸಿದ ಇಬ್ಬರು ಮಹಿಳೆಯರು ಪ್ರತಿಭಟನೆಗೆ ಹೆದರಿ ಪಡೆಯಲು ಸಾಧ್ಯವಾಗದೇ ಹಿಂದಿರುಗಿದ ಘಟನೆ ನಡೆದಿದೆ.

ಕಳೆದ ಮೂರು ದಿನಗಳಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರು ಮುಂದಾಗುತ್ತಿದ್ದಾರೆ ಆದರೂ ದರ್ಶನ ಮಾತ್ರ ಸಾಧ್ಯವಾಗುತ್ತಿಲ್ಲ. ಅಯ್ಯಪ್ಪಸ್ವಾಮಿ ಭಕ್ತರು ಮಹಿಳೆಯರ ದರ್ಶನಕ್ಕೆ ತಡೆ ಒಡ್ಡುತ್ತಿದ್ದಾರೆ.

ಹೆಲ್ಮೆಟ್ ಧರಿಸಿದ್ದ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನಕ್ಕೆ ಮುಂದಾಗಿದ್ದರು. ಭದ್ರತೆ ಇತ್ತಾದರೂ ಪ್ರತಿಭಟನೆಯ ಬಿಸಿಯಿಂದಾಗಿ ದರ್ಶನ ಸಾದ್ಯವಾಗಲಿಲ್ಲ.
ಇದರಲ್ಲಿ ಇನ್ನಷ್ಟು ಓದಿ :