ಹುಬ್ಬಳ್ಳಿ : ಆಗಾಗ ಮೈತ್ರಿ ಪಕ್ಷದ ನಾಯಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂತಾ ಸೋಬಾನ ಹಾಡ್ತಿದ್ದಾರೆ. ಅವರ ಕೆಲವು ಚೇಲಾಗಳು ಸೋ ಎಂದು ಸೋಬಾನ ಹಾಡುತ್ತಿದ್ದಾರೆ. ಹೀಗಿದ್ರೂ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಕೊಂಡಿದ್ದಾರೆ. ಸ್ವಾಭಿಮಾನ ಇರುವ ಖರ್ಗೆ ಯಾಕೆ ಸುಮ್ಮನಿದ್ದಾರೆಗೊತ್ತಿಲ್ಲ ಎಂದು ಸಿದ್ದರಾಮಯ್ಯ