Widgets Magazine

10 ಲಕ್ಷ ಸರಕಾರಿ ಉದ್ಯೋಗ ಭರ್ತಿ

ಪಾಟ್ನಾ| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (19:47 IST)
10 ಲಕ್ಷ ಸರಕಾರಿ ಉದ್ಯೋಗ ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್, ಆರ್ ಜೆಡಿ ಘೋಷಣೆ ಮಾಡಿವೆ. 

ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ಮಹಾಘಟಬಂಧನ್ ನ ಮಿತ್ರ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ 10 ಲಕ್ಷ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ತಿಳಿಸಿವೆ.

ರೈತರಿಗೆ ಬಡ್ಡಿರಹಿತ ಸಾಲ ಹಾಗೂ ನರೇಗಾ ಕೆಲಸದ ದಿನಗಳನ್ನು ಹೆಚ್ಚು ಮಾಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿವೆ.

ಬಿಹಾರದಲ್ಲಿನ ಮಹಾ ಘಟಬಂಧನ್ ನಲ್ಲಿ ಆರ್ ಜೆ ಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರ್ಪಡೆಗೊಂಡಿವೆ.


ಇದರಲ್ಲಿ ಇನ್ನಷ್ಟು ಓದಿ :