90 ವರ್ಷದ ಅಜ್ಜಿಯ ಮೇಲೆ ಕಾಮುಕನ ಅಟ್ಟಹಾಸ

ನವದೆಹಲಿ| pavithra| Last Modified ಗುರುವಾರ, 10 ಸೆಪ್ಟಂಬರ್ 2020 (09:01 IST)
ನವದೆಹಲಿ : ಹಾಲಿಗಾಗಿ ಕಾಯುತ್ತಿದ್ದ 90 ವರ್ಷದ ಅಜ್ಜಿಯ ಮೇಲೆ  37 ವರ್ಷದ ಕಾಮುಕನೊಬ್ಬ ಮಾನಭಂಗ ಎಸಗಿದ ಘಟನೆ ದೆಹಲಿಯ ನಜಾಫ್ ಗರ್ ಎಂಬಲ್ಲಿ ನಡೆದಿದೆ.

ಸಂಜೆಯ ವೇಳೆ ಅಜ್ಜಿ ಹಾಲು ತರುವವನಿಗಾಗಿ ಮನೆಯ ಹೊರಗಡೆ ನಿಂತಿದ್ದಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಹಾಲು ಹಾಕುವವನ ಬಳಿಗೆ ಕರೆದುಕೊಮಡು ಹೋಗುವೆ ಎಂದು ಸುಳ್ಳು ಹೇಳಿ ಜಮೀನಿನ ಕಡೆಗೆ ಕರೆದುಕೊಂಡು ಹೋಗಿ ಮಾನಭಂಗ ಮಾಡಲು ಯತ್ನಿಸಿದ್ದಾನೆ. ಆಗ ಅಜ್ಜಿ ಅದನ್ನು ವಿರೋಧಿಸಿದ್ದಕ್ಕೆ ಆಕೆಯನ್ನು ಥಳಿಸಿದ್ದಾನೆ. ಅಜ್ಜಿಯ ಕೂಗಾಟ ಕೇಳಿ ಅಲ್ಲಿಗೆ ಬಂದ ಗ್ರಾಮಸ್ಥರು ಅಜ್ಜಿಯನ್ನು ರಕ್ಷಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೇ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಜ್ಜಿಯ ದೇಹ ಹಾಗೂ ಖಾಸಗಿ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :