ಫೇಸ್ ಬುಕ್ ಗೆಳತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಜೀವ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

ಪುಣೆ| pavithra| Last Modified ಗುರುವಾರ, 31 ಡಿಸೆಂಬರ್ 2020 (08:05 IST)
ಪುಣೆ : ದೈಹಿಕ ಸಂಬಂಧ ಹೊಂದಿದ್ದ ಫೇಸ್ ಬುಕ್ ಸ್ನೇಹಿತೆಯೊಬ್ಬಳು ಬೆದರಿಕೆ ಹಾಕಿದ ಹಿನ್ನಲೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆಯ ಕೊಯಾಲಿ ಗ್ರಾಮದ ಖೇಡ್ ನಲ್ಲಿ ನಡೆದಿದೆ.

ಮಹಿಳೆ ಮೊದಲು ವಿದ್ಯಾರ್ಥಿಯ ಬಳಿ ದೈಹಿಕ ಸಂಬಂಧ ಹೊಂದುವಂತೆ ಆಮಿಷಯೊಡ್ಡಿದ್ದಾಳೆ. ಬಳಿಕ ಅದಕ್ಕಾಗಿ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾಳೆ. ಹಣ ನೀಡದಿದ್ದರೆ ಅಕ್ರಮ ಸಂಬಂಧವನ್ನು ಆತನ ಹೆತ್ತವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆ ವೇಳೆ ಮೃತನ ಕರೆ ಮಾಹಿತಿ ಪರಿಶೀಲಿಸಿದಾಗ ಆರೋಪಿ ಮಹಿಳೆ ಸಿಕ್ಕಿಹಾಕಿಕೊಂಡಿದ್ದಾಳೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :