ನವದೆಹಲಿ : ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ಬೀಡಿ ಸೇದಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ಫ್ಲೈಟ್ನಲ್ಲಿ ಬೀಡಿ ಸೇದಿ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ರಾಜಸ್ಥಾನದಿಂದ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ವಾರ್ ಪ್ರದೇಶದ 56 ವರ್ಷದ ವ್ಯಕ್ತಿ, ಮಂಗಳವಾರ ಅಹಮದಾಬಾದ್ನಿಂದ ವಿಮಾನ ಪ್ರಯಾಣ ಕೈಗೊಂಡಿದ್ದರು. ಹಾರಾಟದ ವೇಳೆ ವಿಮಾನದಲ್ಲಿ ಪ್ರಯಾಣಿಕ ಶೌಚಾಲಯಕ್ಕೆ