ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಯುವಕ

ಒಡಿಶಾ, ಭಾನುವಾರ, 4 ನವೆಂಬರ್ 2018 (12:56 IST)

ಒಡಿಶಾ : ಪ್ರೀತಿಯನ್ನು ನಿರಾಕರಿಸಿದ ಪ್ರೇಯಸಿಯ ಮೇಲೆ ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಎಸಗಿರುವ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಪಲ್ಲಹರಾದಲ್ಲಿ ನಡೆದಿದೆ.


ಕಾಲಿಯಾ ಮಹಾಕುದ್, ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಅತ್ಯಾಚಾರ ಮಾಡಿದ ಆರೋಪಿಗಳು. ಆರೋಪಿ ಕಾಲಿಯಾ ಮರಗೆಲಸ ಮಾಡುತ್ತಿದ್ದು, ಈತ ಕಳೆದ ಎರಡು-ಮೂರು ವರ್ಷಗಳಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಆ ಹುಡುಗಿ ಈತನ ಪ್ರೇಮ ನಿವೇದನೆಯನ್ನು ನಿರಾಕರಿಸಿದಕ್ಕೆ ಕೋಪಗೊಂಡ ಆತ ತನ್ನ ಸ್ನೇಹಿತರಾದ ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಜೊತೆ ಸೇರಿ ಅಕ್ಟೋಬರ್ 30 ರಂದು ರಾತ್ರಿ 11 ಗಂಟೆ ವೇಳೆಗೆ ಬಲವಂತದಿಂದ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಸಾಮುಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.


ಈ ಘಟನೆಯ ಬಗ್ಗೆ ಯುವತಿ ತನ್ನ ಪೋಷಕರಿಗೆ ತಿಳಿಸಿದ್ದು, ಬಳಿಕ ಪೋಷಕರು ಪಲ್ಲಹರಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಕಾಲಿಯಾನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯಾರ್ಥಿನಿಯನ್ನು ಕೊಲೆ ಮಾಡಲು ಯತ್ನಿಸಿದ ಶಿಕ್ಷಕ ಕಾರಣವೇನು ಗೊತ್ತಾ?

ಹೈದರಾಬಾದ್ : ವಿದ್ಯಾರ್ಥಿನಿ ತನ್ನನ್ನು ತಿರಸ್ಕರಿಸಿದ್ದಕ್ಕೆ ಹಿಂದಿ ಶಿಕ್ಷಕನೊಬ್ಬ ಆಕೆಯನ್ನು ಕೊಲೆ ಮಾಡಲು ...

news

ಪಾರ್ಕ್ ನಲ್ಲಿ ಪ್ರಿಯಕರನ ಜೊತೆಗಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

ಅಸ್ಸಾಂ : ಅಸ್ಸಾಂನಲ್ಲಿ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಪ್ರಿಯಕರನ ...

news

ವಿಚಾರಣೆಗೆ ಹಾಜರಾಗಲು ಅರ್ಜುನ್ ಸರ್ಜಾಗೆ ನೋಟಿಸ್

ಬೆಂಗಳೂರು: ನಟಿ ಶೃತಿ ಹರಿಹರನ್ ರ ಮೀ ಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬಹುಭಾಷಾ ...

news

ಮತ್ತೆ ತೆರೆಯಲಿದೆ ಶಬರಿಮಲೆ ದೇವಾಲಯ: ಮಹಿಳೆಯರಿಗೆ ಪ್ರವೇಶ ಸಿಗುತ್ತಾ?

ತಿರುವನಂತಪುರಂ: 10-50 ವರ್ಷದೊಳಗಿನ ಮಹಿಳೆಯರೂ ಶಬರಿಮಲೆ ದೇವಾಲಯ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ...