ದೆಹಲಿಯಲ್ಲಿ ರೈತರನ್ನು ಪ್ರಚೋಸಿದ್ದು ಇದೇ ನಟ?

ನವದೆಹಲಿ| Krishnaveni K| Last Modified ಬುಧವಾರ, 27 ಜನವರಿ 2021 (09:47 IST)
ನವದೆಹಲಿ: ದೆಹಲಿಯಲ್ಲಿ ನಿನ್ನೆ ರೈತ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ತಿರುಗಲು ಈ ನಟನ ಪ್ರಚೋದನೆಯೇ ಕಾರಣ ಎಂಬ ಸುದ್ದಿ ಹರಡಿದೆ. ಅವರು ಬೇರೆ ಯಾರೂ ಅಲ್ಲ, ಪಂಜಾಬಿ ನಟ, ಗಾಯಕ ದೀಪ್ ಸಿಂಗ್.
 

ಪ್ರತಿಭಟನಾಕಾರರ ಜೊತೆಗಿದ್ದ ದೀಪ್ ಸಿಂಗ್ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಸಿಖ್ ಧ್ವಜಾರೋಹಣ ಮಾಡಲು ಇವರೇ ಪ್ರಚೋದನೆ ನೀಡಿದ್ದರು ಎಂಬ ಆರೋಪಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪ್ ಸಿಂಗ್ ‘ನಾನು ಪ್ರತಿಭಟನಾಕಾರರ ಜೊತೆಗೇ ಇದ್ದೆ. ನಾನು ಹೇಗೆ ಲಕ್ಷಾಂತರ ರೈತರನ್ನು ಪ್ರಚೋದಿಸಲು ಹೇಗೆ ಸಾಧ್ಯ?’ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :