ಅನಂತ್ ಕುಮಾರ್ ಹೆಗಡೆಯನ್ನು ಸಂಪುಟದಿಂದ ವಜಾಗೊಳಿಸಿ - ರಾಹುಲ್ ಗಾಂಧಿ ಆಗ್ರಹ

ನವದೆಹಲಿ, ಮಂಗಳವಾರ, 29 ಜನವರಿ 2019 (10:06 IST)

ನವದೆಹಲಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ  ವೈಯಕ್ತಿಕ ಜೀವನದ ಬಗ್ಗೆ ವಿವಾದಾತ್ನಕ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.


ಸಚಿವ ಅನಂತ್ ಕುಮಾರ್ ಹೆಗಡೆಯವರು ಕೆಪಿಸಿಸಿ ಅಧ್ಯಕ್ಷ ದಿನೆಶ್ ಗುಂಡುರಾವ್ ಅವರ  ಟ್ವೀಟ್ ಗೆ ಪ್ರತಿಕ್ರಿಯಿಸಿ ‘ತಮ್ಮ ಕೊಡುಗೆ, ಸಾಧನೆ ಏನೆಂದು ಹೇಳಲಿ. ನೀವು  ಮುಸ್ಲಿಂ ಮಹಿಳೆಯ ಹಿಂದೆ ಹೋದರಲ್ಲವೇ ‘ ಎಂದು ಹೇಳಿದ್ದರು. ಈ ಹೇಳಿಕೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, 'ಈ ಸಚಿವ ಪ್ರತಿಯೊಬ್ಬ ಭಾರತೀಯನೂ ಮುಜುಗರದಿಂದ ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ. ಸಚಿವರಾಗಿರುವುದಕ್ಕೆ ಇವರು ಅಯೋಗ್ಯರು. ಸಂಪುಟದಿಂದ ತಕ್ಷಣ ಕಿತ್ತು ಹಾಕಬೇಕು ,'ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ

ನವದೆಹಲಿ : ಅನಾರೋಗ್ಯದ ಹಿನ್ನಲೆಯಲ್ಲಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಇಂದು ...

news

ಸೈನಿಕನ ವೇಷ ಹಾಕಿ OLXನಲ್ಲಿ ವಾಹನ ಸೇಲ್ ಗಿಟ್ಟು ಮೋಸ ಮಾಡುವವರಿದ್ದಾರೆ ಎಚ್ಚರಿಕೆ

ಬೆಂಗಳೂರು : OLXನಲ್ಲಿ ವಾಹನ ಸೇಲ್ ಗಿಡುವ ನೆಪದಲ್ಲಿ ವ್ಯಕ್ತಿಯೊಬ್ಬ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ...

news

ರಕ್ಷಣೆ ನೀಡಬೇಕಾದ ಸೆಕ್ಯೂರಿಟಿ ಗಾರ್ಡ್ ನಿಂದಲೇ ವಕೀಲೆಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು : ರಾತ್ರಿ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಕೀಲೆಯ ಮೇಲೆ ಸೆಕ್ಯೂರಿಟಿ ಗಾರ್ಡ್ ...

news

ಅಕ್ರಮ ಸಂಬಂಧ ಒಪ್ಪದ ಮಗನ ಮೇಲೆ ತಾಯಿ ಎಸಗಿದ್ದಾಳೆ ಇಂತಹ ಘೋರ ಕೃತ್ಯ

ನವದೆಹಲಿ : ಅಕ್ರಮ ಸಂಬಂಧ ಒಪ್ಪದ ಮಗನನ್ನು ಲವರ್ ಜೊತೆ ಸೇರಿ ತಾಯಿನೇ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ...