ಮೊಬೈಲ್‌ನಲ್ಲಿ ಸಿನೆಮಾ ನೋಡುತ್ತಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಮುಂಬೈ, ಗುರುವಾರ, 11 ಏಪ್ರಿಲ್ 2019 (13:08 IST)

ಮೊಬೈಲ್‌ನಲ್ಲಿ ನಿರಂತರವಾಗಿ ಸಿನೆಮಾ ನೋಡುತ್ತಿದ್ದ ಪತ್ನಿ ವಿರುದ್ಧ ಆಕ್ರೋಶಗೊಂಡ ಪತಿ ಆಕೆಯನ್ನು ಹತ್ಯೆಗೈದ ಘಟನೆ ವರದಿಯಾಗಿದೆ.
ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 32 ವರ್ಷ ವಯಸ್ಸಿನ ಆರೋಪಿ ಚೇತನ್ ಚೌಗುಲೆ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಪತ್ನಿ ಮೊಬೈಲ್‌ನಲ್ಲಿ ನಿರಂತರವಾಗಿ ಸಿನೆಮಾ ನೋಡುತ್ತಿರುವುದರಿಂದ ರೋಸಿ ಹೋಗಿದ್ದ ಎನ್ನಲಾಗಿದೆ.
 
ಹಲವಾರು ಬಾರಿ ರಾತ್ರಿಪೂರ್ತಿ ಸಿನೆಮಾ ನೋಡುವುದು ಸರಿಯಲ್ಲ ಎಂದು ಪತ್ನಿಗೆ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಕೆಲವು ಬಾರಿ ಜಗಳವಾಡಿ ಮಗುವನ್ನು ಕರೆದುಕೊಂಡು ತನ್ನ ತಂದೆತಾಯಿ ಮನೆಗೆ ಹೋಗುತ್ತಿದ್ದಳು ಎಂದು ಆರೋಪಿ ಚೌಗಲೆ ತಿಳಿಸಿದ್ದಾನೆ.
 
ನಿನ್ನೆ ರಾತ್ರಿ ಕೂಡಾ ಪತ್ನಿ ಸಿನೆಮಾ ನೋಡುತ್ತಿರುವಾಗ ಶಬ್ದದಿಂದ ನಿದ್ದೆ ಬರುತ್ತಿಲ್ಲ. ಸಿನೆಮಾ ನೋಡುವುದು ಬಿಟ್ಟು ಮಲಗು ಎಂದು ಹೇಳಿದ್ದೆ. ಆದರೂ ಕೇಳಲಿಲ್ಲ. ನಾನು ಹಾಗೇ ನಿದ್ದೆಗೆ ಜಾರಿದೆ. ಬೆಳಗಿನ ಜಾವ ಎದ್ದಾಗಲೂ ಪತ್ನಿ ಸಿನೆಮಾ ನೋಡುತ್ತಿರುವುದು ಕಂಡು ಕೋಪ ತಡೆಯಲಾಗಲಿಲ್ಲ. ಕೋಪದ ಭರದಲ್ಲಿ ನೈಲಾನ್ ಹಗ್ಗದಿಂದ ಆಕೆಯ ಕೊರಳಿಗೆ ಬಿಗಿದಾಗ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ವಾಸ್ತವದ ಅರಿವಾದ ನಂತರ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ಆರೋಪಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎಂದ ಕಾಮುಕ ಪತಿ

ಅಹ್ಮದಾಬಾದ್: ಪ್ರತಿನಿತ್ಯ ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎನ್ನುತ್ತಿದ್ದ ಕಾಮುಕ ...

news

ಚುನಾವಣಾ ಪ್ರಚಾರದ ವೇಳೆ ಯುವನ ಕೆನ್ನೆಗೆ ಬಾರಿಸಿದ ನಟಿ ಖುಷ್ಪೂ. ಕಾರಣವೇನು ಗೊತ್ತಾ?

ಬೆಂಗಳೂರು : ನಟಿ ಖುಷ್ಪೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿದ ವೇಳೆ ಯುವಕನೊಬ್ಬನ ...

news

ಪತ್ನಿ ಮಾನಸಿಕ ಅಸ್ವಸ್ಥೆಯಾದ್ದರಿಂದ ಲೈಂಗಿಕ ಬಯಕೆಗಳು ಮೂಡುತ್ತಿಲ್ಲ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ: ನನಗೆ 39 ವರ್ಷ. 5 ವರ್ಷದ ಹಿಂದೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತೀವ್ರ ಮಾನಸಿಕ ...

news

ಎಷ್ಟು ವರ್ಷದವರೆಗೆ ಶಿಶ್ನ ಬೆಳವಣಿಗೆ ಹೊಂದುತ್ತದೆ?

ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನನ್ನ ಶಿಶ್ನದ ಗಾತ್ರದ ಬಗ್ಗೆ ಚಿಂತಿತನಾಗಿದ್ದೇನೆ. ಎಷ್ಟು ...