ರೋಡ್ ಶೋ ವೇಳೆ ಸಿಎಂ ಅರವಿಂದ ಕೇಜ್ರಿವಾಲ್ ಕಪಾಳಕ್ಕೆ ಬಾರಿಸಿದ ವ್ಯಕ್ತಿ

ನವದೆಹಲಿ, ಭಾನುವಾರ, 5 ಮೇ 2019 (11:50 IST)

ನವದೆಹಲಿ : ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ವ್ಯಕ್ತಿಯೊರ್ವ ಕಪಾಳಕ್ಕೆ ಬಾರಿಸಿದ ಘಟನೆ ದೆಹಲಿಯ ಮೋತಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ನಡೆದಿದೆ.ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೇಜ್ರಿವಾಲ್ ರೋಡ್ ಶೋ ನಡೆಸಿದ್ದರು. ಆ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಿ ಕಾರು ಹತ್ತಿ ಕೇಜ್ರಿವಾಲ್ ಮುಖಕ್ಕೆ ಬಾರಿಸಿ ಪರಾರಿಯಾಗಲು ಯತ್ನಿಸಿದ್ದ, ಆಗ  ಎಚ್ಚೆತ್ತ ಕಾರ್ಯಕರ್ತರು ವ್ಯಕ್ತಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

 

ಸಿಎಂ ಅರವಿಂದ ಕೇಜ್ರಿವಾಲ್ ಅವರ ಮೇಲೆ ಈ ಹಿಂದೆ ಕೂಡ ಈ ರೀತಿ  ದಾಳಿಗಳು ನಡೆದಿದ್ದು, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಎಎಪಿ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಎರಡನೇ ರೂಪ - ಉಮೇಶ್ ಜಾಧವ್

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಎರಡನೇ ರೂಪ ಎಂದು ಡಾ.ಉಮೇಶ್ ಜಾಧವ್ ...

news

ವಿದ್ಯೆ ಕಲಿಸುವ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ನಡೆದಿದೆ ಇಂತಹ ನೀಚ ಕೃತ್ಯ

ಮುಂಬೈ : ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುವುದರ ಮೂಲಕ ಆಕೆಯ ...

news

ಈ ಡ್ರೆಸ್ ತಯಾರಿಸಿದ್ದು ಯಾವುದರಿಂದ ಎಂದು ತಿಳಿದರೆ ಶಾಕ್ ಆಗ್ತೀರಾ

ನ್ಯೂಯಾರ್ಕ್ : ಪ್ರತಿಭೆಯೊಂದಿದ್ದರೆ ಎಂತಹ ಅಸಾಧ್ಯವಾದ ಕಾರ್ಯಗಳನ್ನು ಸಾಧಿಸಿ ತೋರಿಸಬಹುದು ಎನ್ನುವುದನ್ನು ...

news

ಕರಾಳ ಅಮವಾಸ್ಯೆ: ದೇವರಿಗೆ ಹೊರಟವರು ಸೇರಿದ್ದು ಮಸಣಕ್ಕೆ...

ಅಮವಾಸ್ಯೆ ದಿನ ದೇವಸ್ಥಾನಕ್ಕೆ ಅಂತ ತೆರಳಿದ ದಂಪತಿ ಭೀಕರವಾಗಿ ಸಾವನ್ನಪ್ಪಿ ಮಸಣ ಸೇರಿದ ದಾರುಣ ಘಟನೆ ...