ಯೂಟ್ಯೂಬ್ ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ 11 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಸಿರಿಸಿಲ್ಲಾದಲ್ಲಿ 6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಯೂಟ್ಯೂಬ್ನಲ್ಲಿ ತಮಾಷೆಯ ವಿಡಿಯೋಗಳನ್ನು ಸಾಮಾನ್ಯವಾಗಿ ವೀಕ್ಷಿಸುತ್ತಿದ್ದ.ಶನಿವಾರ ರಾತ್ರಿ ಊಟ ಮುಗಿಸಿ ತನ್ನ ಕೋಣೆಗೆ ಹೋದವನೆ ಬಾಗಿಲು ಚಿಲಕ ಹಾಕಿಕೊಂಡು ಮೊಬೈಲ್ ನೋಡಲು ಶುರು ಮಾಡಿದ್ದ, ಉದಯ್ ಪೋಷಕರು ಎಷ್ಟೇ ಕರೆದರೂ ಉತ್ತರ ನೀಡಲಿಲ್ಲ, ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ, ನಂತರ ಅವರು