Widgets Magazine

ಮಾಜಿ ಪ್ರಧಾನಿಯನ್ನು ಟೀಕಿಸಲು ಹೋಗಿ ಟ್ರೋಲ್ ಆದ ಬಿಜೆಪಿ ರಾಷ್ಟ್ರಾಧ್ಯಕ್ಷ

ನವದೆಹಲಿ| pavithra| Last Modified ಶನಿವಾರ, 27 ಜೂನ್ 2020 (08:38 IST)

ನವದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಟೀಕೆ ಮಾಡಲು ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಡಾ.ಮನಮೋಹನ್ ಸಿಂಗ್ ಅದೇ ಪಕ್ಷಕ್ಕೆ ಸೇರಿದವರು. ಅಸಹಾಯಕವಾಗಿ 43,000ಕಿ.ಮೀ.ಗಿಂತಲೂ ಹೆಚ್ಚು ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಒಪ್ಪಿಸಿದರು ಎಂದು ಬರೆದುಕೊಂಡಿದ್ದಾರೆ.

ಭೂವಿಯ ಸುತ್ತಳತೆ ಇರುವುದೇ 40,075ಕಿ.ಮೀ. ಆದರೆ  ಜೆ.ಪಿ.ನಡ್ಡಾ ಅವರು ಭಾರತದ ಭೂಪ್ರದೇಶವೇ 43,000ಕಿ.ಮೀ.ಗಿಂತಲೂ ಹೆಚ್ಚು  ಎಂದು ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :