Widgets Magazine

ದೆಹಲಿಯಲ್ಲಿ ವಾಯುಮಾಲಿನ್ಯ: ಗೋವಾಗೆ ರಜೆಗೆ ಬಂದ ಸೋನಿಯಾ, ರಾಹುಲ್ ಗೆ ಬಿಜೆಪಿ ಟಾಂಗ್

ಪಣಜಿ| Krishnaveni K| Last Modified ಭಾನುವಾರ, 22 ನವೆಂಬರ್ 2020 (09:52 IST)
ಪಣಜಿ: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಗೋವಾದಲ್ಲಿ ರಜೆಗೆ ತೆರಳಿರುವುದನ್ನು ಬಿಜೆಪಿ ಲೇವಡಿ ಮಾಡಿದೆ.
 

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವಿಟರ್ ಮೂಲಕ ಟೀಕಿಸಿದ್ದಾರೆ. ‘ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಗೋವಾದಲ್ಲಿ, ಪ್ರಿಯಾಂಕ ಹಿಮಾಚಲ ಪ್ರದೇಶದಲ್ಲಿ ರಜೆಯ ಮಜಾದಲ್ಲಿದ್ದಾರೆ. ಆದರೆ ಅಮಿತ್ ಶಾ ಪ.ಬಂಗಾಲದ ಬಳಿಕ ತಮಿಳುನಾಡಿನಲ್ಲಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಕ್ಷ ಸಂಘಟನೆಗೆ 100 ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹಾಗಿದ್ದರೂ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯೇ ಹೇಗೆ ಗೆಲುವು ಸಾಧಿಸುತ್ತದೆ ಎಂದು ಅನುಮಾನದಿಂದ ನೋಡುತ್ತದೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :