Widgets Magazine

ನಾಲ್ಕು ವರ್ಷದ ಬಾಲಕನನ್ನು ಹತ್ಯೆ ಮಾಡಿದ ತಾಯಿಯ ಪ್ರಿಯಕರ

ಮದುರೈ| Krishnaveni K| Last Modified ಮಂಗಳವಾರ, 25 ಫೆಬ್ರವರಿ 2020 (09:14 IST)
ಮದುರೈ: ಅಕ್ರಮ ಸಂಬಂಧದ ಬಗ್ಗೆ ತಂದೆಗೆ ಮಾಹಿತಿ ನೀಡಿದ್ದಕ್ಕೆ ನಾಲ್ಕು ವರ್ಷದ ಬಾಲಕನನ್ನು ಅಮ್ಮನ ಪ್ರಿಯಕರನೇ ಕೊಂದ ಘಟನೆ ಮದುರೈನಲ್ಲಿ ನಡೆದಿದೆ.

 
ನಾಲ್ಕು ವರ್ಷದ ಲೋಕೇಶ್ ಎಂಬ ಬಾಲಕ ಕೊಲೆಗೀಡಾದವನು. ಈತ ತನ್ನ ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ಸುಳಿವು ನೀಡಿದ್ದ. ಇದರಿಂದ ಸಿಟ್ಟಿಗೆದ್ದ ತಾಯಿಯ ಪ್ರಿಯಕರ ಸೋರಿಮುತ್ತು ಎಂಬಾತ ಆತನನ್ನು ಮನಬಂದಂತೆ ಥಳಿಸಿದ್ದು, ತೀವ್ರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
 
ಈ ಸಂಬಂಧ ತಾಯಿ ದೀಪಾಳನ್ನು ಬಂಧಿಸಿರುವ ಪೊಲೀಸರು ಆರೋಪಿ ಸೋರಿಮುತ್ತುಗಾಗಿ ಹುಡುಕಾಟ ನಡೆಸಿದ್ದಾರೆ. ಇವರಿಬ್ಬರ ಅಕ್ರಮ ಸಂಬಂಧಕ್ಕೆ ಲೋಕೇಶ್ ಸಾಕ್ಷಿಯಾಗಿದ್ದ.
ಇದರಲ್ಲಿ ಇನ್ನಷ್ಟು ಓದಿ :