ವಿವಾದಾತ್ಮಕ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಕೇಸ್, ಇಂದೇ ವಿಚಾರಣೆ

ಉತ್ತರ ಪ್ರದೇಶ| Kusuma| Last Modified ಶನಿವಾರ, 4 ನವೆಂಬರ್ 2017 (11:07 IST)
ಉತ್ತರ ಪ್ರದೇಶ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ವಾರಣಾಸಿ ಕೋರ್ಟ್‌ ನಲ್ಲಿ ಕೇಸ್‌ ದಾಖಲಾಗಿದ್ದು, ಇಂದೇ ವಿಚಾರಣೆ ನಡೆಯಲಿದೆ.

ಇತ್ತೀಚೆಗಷ್ಟೇ ನಟ ಕಮಲ್ ಹಾಸನ್, ಹಿಂದೂಗಳಲ್ಲೂ ಭಯೋತ್ಪಾದನೆ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಅದು ಅನೇಕ ಸಲ ಸಾಬೀತಾಗಿದೆ. ಈಗಾಲೂ ಹಿಂದೂಗಳು ಹಿಂಸೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಮಿಳು ಪತ್ರಿಕೆಯೊಂದರ ಅಂಕಣದಲ್ಲಿ ಆರೋಪಿಸಿದ್ದರು. ಕಮಲ್ ಹಾಸನ್ ಅಂಕಣಕ್ಕೆ ಭಾರೀ ವಿರೋಧ ಹಾಗೂ ಬೆಂಬಲ ಕೂಡ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ವಾರಣಾಸಿ ಕೋರ್ಟ್‌ ನಲ್ಲಿ ಕಮಲ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್‌  500, 511, 298, 295(ಎ) & 505(ಸಿ) ಕಾಯ್ದೆಯಡಿ ಕೇಸ್‌ ದಾಖಲಾಗಿದ್ದು, ವಿಚಾರಣೆಯನ್ನು ಕೋರ್ಟ್‌ ಇಂದು ನಡೆಸಲಿದೆ.


ಇದರಲ್ಲಿ ಇನ್ನಷ್ಟು ಓದಿ :