Widgets Magazine

ಕೊರೊನಾ ಭೀತಿ ಹಿನ್ನಲೆ ; ಸಾಲಗಾರರಿಗೆ ಕೊಂಚ ರಿಲೀಫ್ ನೀಡಿದ ಆರ್ ಬಿಐ

ನವದೆಹಲಿ| pavithra| Last Modified ಶುಕ್ರವಾರ, 27 ಮಾರ್ಚ್ 2020 (10:45 IST)
ನವದೆಹಲಿ : ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಔಟ್ ಮಾಡಿದ ಕಾರಣ ಸಾಲಗಾರರಿಗೆ ಕೊಂಚ ರಿಲೀಫ್ ನೀಡಿದೆ.


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, 3 ತಿಂಗಳ ಸಾಲದ ಇಎಂಐ ಮುಂದೂಡಿಕೆ ಮಾಡಿದೆ. ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸೇರಿದಂತೆ ಎಲ್ಲಾ ಸಾಲಗಳ ಇಎಂಐ ಜೂನ್ ವರೆಗೆ ಮುಂದೂಡಿಕೆ ಮಾಡಲಾಗಿದೆ. ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಸೇರಿ ಎಲ್ಲಾ ಬ್ಯಾಂಕ್ ಗಳು ಹಾಗೂ ಗೋಲ್ಡ್ ಲೋನ್, ಹಣಕಾಸು ಸಂಸ್ಥೆಗಳು ಸೇರಿ ಎಲ್ಲದಕ್ಕೂ ದು ಅನ್ವಯವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :