ವ್ಯಾಕ್ಸಿನ್ ಪಡೆದುಕೊಂಡರೂ ಕೊರೋನಾ ಬಂದವರಿಗೆ ಈ ಲಾಭವಾಗಿದೆ!

ನವದೆಹಲಿ| Krishnaveni K| Last Modified ಶನಿವಾರ, 5 ಜೂನ್ 2021 (09:06 IST)
ನವದೆಹಲಿ: ಕೊರೋನಾಗೆ ವ್ಯಾಕ್ಸಿನ್ ಪಡೆದುಕೊಂಡರೂ ಸೋಂಕು ತಗುಲಿದೆ ಎಂದು ಅಳುಕಬೇಡಿ! ಈ ಬಗ್ಗೆ ಏಮ್ಸ್ ಹೊಸ ವಿಚಾರವೊಂದನ್ನು ಬೆಳಕಿಗೆ ತಂದಿದೆ.

 
ಪೂರ್ಣ ಪ್ರಮಾಣದ ಲಸಿಕೆ ತೆಗೆದುಕೊಂಡರೂ ಕೊರೋನಾ ಸೋಂಕಿಗೊಳಗಾದವರು ಬೇಗನೇ ಗುಣಮುಖರಾಗಿದ್ದಾರೆ ಮತ್ತು ಇಂತಹವರು ಮೃತಪಟ್ಟ ಉದಾಹರಣೆಯೇ ಇಲ್ಲ ಎಂಬ ಮಹತ್ವದ ಅಂಶವನ್ನು ಏಮ್ಸ್ ಬಹಿರಂಗಪಡಿಸಿದೆ.
 
ಇದು ವ್ಯಾಕ್ಸಿನ್ ಪಡೆದುಕೊಂಡವರಿಗೆ ಸಿಹಿ ಸುದ್ದಿಯೇ. ಒಂದು ವೇಳೆ ನೀವು ವ್ಯಾಕ್ಸಿನ್ ಪಡೆದುಕೊಂಡರೂ ಸೋಂಕು ತಗುಲಿದ್ದರೆ, ಬೇಗನೇ ಗುಣಮುಖರಾಗುತ್ತೀರಿ ಮತ್ತು ಹೆಚ್ಚು ಅಪಾಯಗಳು ಎದುರಾಗುವುದಿಲ್ಲ ಎಂದು ಏಮ್ಸ್ ಹೇಳಿದೆ. ಹೀಗಾಗಿ ವ್ಯಾಕ್ಸಿನ್ ಪಡೆದುಕೊಳ್ಳುವುದು ಅತೀ ಮುಖ್ಯವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :