ಸತ್ತಿದ್ದಾನೆಂದು ತಿಳಿದು ಮಣ್ಣು ಮಾಡಿದ್ದ ಕೊವಿಡ್ ರೋಗಿ ವಾರದೊಳಗೇ ಮನೆಯಲ್ಲಿ ಪ್ರತ್ಯಕ್ಷವಾಗಬೇಕೇ?!

ಕೋಲ್ಕೊತ್ತಾ| Krishnaveni K| Last Modified ಸೋಮವಾರ, 23 ನವೆಂಬರ್ 2020 (10:04 IST)
ಕೋಲ್ಕೊತ್ತಾ: ಕೊವಿಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿದ್ದ ವೃದ್ಧನನ್ನು ಮೃತಪಟ್ಟಿದ್ದಾನೆಂದು ಘೋಷಿಸಿದ್ದ ಆಸ್ಪತ್ರೆ ಸಿಬ್ಬಂದಿ ಆತನ ಶವವನ್ನು ಮನೆಯವರಿಗೆ ಹಸ್ತಾಂತರಿಸಿದ್ದರು. ಅದರಂತೆ ಮನೆಯವರೂ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಇದಾದ ವಾರದ ಬಳಿಕ ಆ ವ್ಯಕ್ತಿ ದುತ್ತನೆ ಎದುರಿಗೆ ಪ್ರತ್ಯಕ್ಷವಾದರೆ ಹೇಗಾಗಿರಬೇಡ?

 
ಇದು ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ. ಆಸ್ಪತ್ರೆಯ ಬೇಜವಾಬ್ಧಾರಿಯಿಂದ ಈ ಘಟನೆ ಸಂಭವಿಸಿದೆ. ವೃದ್ಧ ಮೃತಪಟ್ಟಿರುವುದಾಗಿ ತಪ್ಪಾಗಿ ವರದಿ ನೀಡಿದ್ದ ಆಸ್ಪತ್ರೆ ಸಿಬ್ಬಂದಿ ಬೇರೊಬ್ಬರ ಶವವನ್ನು ಮನೆಯವರಿಗೆ ನೀಡಿದ್ದರು. ಅದರಂತೆ ಯಾರದ್ದೋ ಶವದ ಅಂತ್ಯಸಂಸ್ಕಾರವನ್ನು ಮನೆಯವರು ಮಾಡಿದ್ದರು. ಇನ್ನೇನು ಆತನ ಶ್ರಾದ್ಧ ಸಂಸ್ಕಾರವನ್ನು ಮಾಡುತ್ತಿರುವಾಗ ಆಸ್ಪತ್ರೆ ಸಿಬ್ಬಂದಿ ತಮ್ಮ ಪ್ರಮಾದದ ಬಗ್ಗೆ ಫೋನ್ ಮಾಡಿ ತಿಳಿಸಿದ್ದು, ತಕ್ಷಣವೇ ಆಸ್ಪತ್ರೆಗೆ ತೆರಳಿದ ಕುಟುಂಬಸ್ಥರು ವೃದ್ಧನನ್ನು ಮನೆಗೆ ಕರೆತಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :