ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ - ಅರವಿಂದ್ ಕೇಜ್ರಿವಾಲ್

ನವದೆಹಲಿ, ಗುರುವಾರ, 14 ಫೆಬ್ರವರಿ 2019 (10:44 IST)

ನವದೆಹಲಿ : ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರದಾನಿ ಮೋದಿಯವರ  ಕುರಿತು  ವ್ಯಂಗ್ಯವಾಡಿದ್ದಾರೆ.


ಜಂತರ್ ಮಂತರ್ ನಲ್ಲಿ ನಡೆದ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್, ‘ಪ್ರಧಾನಿ ಹುದ್ದೆ ಎಂಬುದು ತುಂಬಾ ಪ್ರಮುಖ ಸ್ಥಾನ. ಕಳೆದ ಬಾರಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದಿರಿ. ಅದರ ಪರಿಣಾಮ ಏನಾಗಿದೆ ಎಂದು ಇಡೀ ದೇಶಕ್ಕೇ ತಿಳಿದಿದೆ. ಆ ವ್ಯಕ್ತಿಗೆ ಯಾವ ಯಾವ ಕಡತಗಳಿಗೆ ಸಹಿ ಹಾಕಬೇಕು ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.


‘ಅಲ್ಲದೇ ಅತ್ಯುತ್ತಮ ವ್ಯಕ್ತಿಗಳು, ಉನ್ನತ ಶಿಕ್ಷಣ ಹೊಂದಿರುವವರನ್ನು ಆ ಹುದ್ದೆಗೆ ಆಯ್ಕೆ ಮಾಡಬೇಕಿದೆ. ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ’ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರೇಮಿಗಳ ದಿನದ ಹಿನ್ನಲೆ; ಮಾರುಕಟ್ಟೆಯಲ್ಲಿ ಭಾರೀ ದುಬಾರಿಯಾಯ್ತು ರೆಡ್ ರೋಸ್

ಬೆಂಗಳೂರು : ಪ್ರೇಮಿಗಳ ದಿನವಾದ ಇಂದು ಪ್ರೀತಿಯ ಸಂಕೇತವಾದ ಗುಲಾಬಿ ಹೂಗಳಿಗೆ ಬಾರೀ ಬೇಡಿಕೆಯಿರುವ ...

news

ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ; ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ ಬಿಜೆಪಿ

ಬೆಂಗಳೂರು : ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ನಡೆದ ಹಿನ್ನಲೆಯಲ್ಲಿ ಇಂದು ಬಿಜೆಪಿ ರಾಜ್ಯಾದ್ಯಂತ ...

news

ಪ್ರಿಯತಮನ ಜೊತೆ ಮದುವೆಯಾಗಲು ಮನೆಬಿಟ್ಟು ಹೋದ ಯುವತಿಗೆ ಆಗಿದ್ದೇನು ಗೊತ್ತಾ?

ನವದೆಹಲಿ : ಪ್ರಿಯತಮನೊಂದಿಗೆ ಮದುವೆಯಾಗಲು ಮನೆಬಿಟ್ಟು ಹೋದ 15 ವರ್ಷದ ಬಾಲಕಿ ದಾರಿ ತಪ್ಪಿ ಕಾಮುಕರ ಕೈಗೆ ...

news

ಗೋವಾ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಗೆ ಪೊಲೀಸ್ ಪಡೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಪಣಜಿ : ಗೋವಾದ ಕ್ಯಾಲಂಗುಟ್ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ ...