ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲು ಹೋದ ಪಾಪಿಗೆ ಆದ ಗತಿಯೇನು ಗೊತ್ತಾ?

ಕೋಲ್ಕತ್ತಾ, ಗುರುವಾರ, 7 ಮಾರ್ಚ್ 2019 (06:54 IST)

ಕೋಲ್ಕತ್ತಾ: ಮಹಿಳೆಯೊಬ್ಬಳ ಮೇಲೆ ಎಸಗಿದ 35 ವರ್ಷದ ವ್ಯಕ್ತಿಯೊಬ್ಬ ಬಳಿಕ ಆಕೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಹೋಗಿ ತಾನೇ ಆ ಬೆಂಕಿಯಲ್ಲಿ ಬೆಂದು ಸಾವನಪ್ಪಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.


ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, ತನ್ನಿಬ್ಬರು ಮಕ್ಕಳ ಜೊತೆ ಮಾಲ್ಡಾದ ಸುಭಾಶ್ ನಗರದಲ್ಲಿ ವಾಸಿಸುತ್ತಿದ್ದರು. ಕೆಲದಿನಗಳಿಂದ ಆರೋಪಿ ಮಹಿಳೆಗೆ ತೊಂದರೆ ನೀಡುತ್ತಿದ್ದನು. ಆದ್ರೆ ಸೋಮವಾರ ರಾತ್ರಿ ವೇಳೆ ಆರೋಪಿ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸೆಗಿದ್ದಾನೆ. ಬಳಿಕ ಆಕೆಯನ್ನು ಕೊಲ್ಲಲು ಬೆಂಕಿ ಹಚ್ಚಿದ್ದಾನೆ. ಆದರೆ ಆಕಸ್ಮಿಕವಾಗಿ ಬೆಂಕಿ  ಆತನಿಗೂ ತಗುಲಿದೆ.


ಮಹಿಳೆಯ ಮನೆಯಿಂದ ಹೊಗೆಬರುತ್ತಿರುವುದನ್ನು ಕಂಡು ಸ್ಥಳಕ್ಕೆ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆ ಮುಖ ಹಾಗೂ ಕೈಗಳಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರೋಪಿ ದೇಹವು ಸಂಪೂರ್ಣ ಸುಟ್ಟುಹೋಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ. ಸದ್ಯ ಘಟನೆ ಕುರಿತು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ಪಡೆದಿದ್ದು, ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತಿ ಮಾಡಿದ್ದೇನು ಗೊತ್ತಾ?

ಚೆನ್ನೈ : ಪತ್ನಿ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡ ಪತಿಯೊಬ್ಬ ತನ್ನ ...

news

16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರಿಂದ ಸಾಮೂಹಿಕ ಅತ್ಯಾಚಾರ

ಮುಂಬೈ : 16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರು ಸೇರಿಕೊಂಡು ಏಳು ತಿಂಗಳ ಕಾಲ ಸಾಮೂಹಿಕ ...

news

ಸ್ಯಾಂಡಲ್ ವುಡ್ ನನ್ನ ಪರ ಇದೆ ಎಂದ ಸುಮಲತಾ

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯನವರು ಸುಮಲತಾಗೆ ಟಿಕೆಟ್ ನಿರಾಕರಣೆ ...

news

ಪೊಲೀಸರೊಂದಿಗೆ ಕೆಂಡವಾಗಿ ಕೆಂಡ ಹಾಯ್ದ ಭಕ್ತರು!

ಪೊಲೀಸರೊಂದಿಗೆ ಭಕ್ತರು ಕೆಂಡದಂತಾಗಿ ಕೆಂಡವನ್ನು ಹಾಯ್ದಿರುವ ಘಟನೆ ನಡೆದಿದೆ.