ಚೆನ್ನೈ : ಆಡಿದ್ದು ಸಾಕು, ಹೊಗಿ ಓದಿಕೋ ಎಂದು ತಂದೆ ಗದರಿದ್ದಕ್ಕೆ 9 ವರ್ಷದ ಬಾಲಕಿ ನೊಂದು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ತಮಿಳುನಾಡಿದ ತಿರುವಳ್ಳೂರಿನಲ್ಲಿ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸೋಮವಾರ ಬಾಲಕಿ ತನ್ನ ಸಂಬಂಧಿಕರ ಮನೆಯ ಬಳಿ ಆಟವಾಡುತ್ತಿದ್ದುದನ್ನು ನೋಡಿದ ತಂದೆ ಕೃಷ್ಣಮೂರ್ತಿ, ಆಡಿದ್ದು ಸಾಕು, ಹೋಗಿ ಓದಿಕೋ ಎಂದು ಮಗಳಿಗೆ ಗದರಿದ್ದಾರೆ. ಬಳಿಕ ಮನೆಯ ಬೀಗವನ್ನು ಮಗಳ ಕೈಯಲ್ಲಿ ನೀಡಿ