ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ತಂದೆ!

ರಾಜಸ್ಥಾನ| Ramya kosira| Last Modified ಶುಕ್ರವಾರ, 26 ನವೆಂಬರ್ 2021 (15:16 IST)
ಉದಯಪುರ : ಮಗ ಹೋಂ ವರ್ಕ್ ಮಾಡಿಲ್ಲ ಎಂಬ ಸಿಟ್ಟಿನಿಂದ ತಂದೆ ತನ್ನ 8 ವರ್ಷದ ಮಗನನ್ನು ಫ್ಯಾನಿಗೆ ತಲೆಕೆಳಗಾಗಿ ನೇತು ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ಬಾಲಕ ಫ್ಯಾನ್ಗೆ ನೇತಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣ ಆ ಬಾಲಕನ ತಾಯಿ ಹೋಗಿ ಮಗನನ್ನು ಬಿಡಿಸಿಕೊಂಡಿದ್ದಾಳೆ. ಇಲ್ಲದಿದ್ದರೆ ಅನಾಹುತವೇ ನಡೆದುಹೋಗುತ್ತಿತ್ತು.
ಮಗನ ಕೈ, ಕಾಲುಗಳನ್ನು ಕಟ್ಟಿ ಆತನನ್ನು ತಲೆ ಕೆಳಗಾಗಿ ಫ್ಯಾನ್ಗೆ ನೇತು ಹಾಕಲಾಗಿತ್ತು. ಆತನಿಗೆ ಶಿಕ್ಷೆ ನೀಡಬೇಕೆಂದು ಮನಬಂದಂತೆ ಥಳಿಸಲು ಹೋದಾಗ ಆ ಬಾಲಕನ ತಾಯಿ ಬಂದು ಗಂಡನಿಂದ ತನ್ನ ಮಗನನ್ನು ಬಿಡಿಸಿಕೊಂಡಿದ್ದಾಳೆ. ಈ ಘಟನೆ ನಡೆದ ನಂತರ ಬಾಲಕನ ತಾಯಿ ಚಿತ್ತೋರ್ಗಢದಲ್ಲಿರುವ ಜೋಗ್ನಿಯಮಠ ಪ್ರದೇಶಕ್ಕೆ ತೆರಳಿ ತನ್ನ ಮಾವನಿಗೆ ಆ ವಿಡಿಯೋವನ್ನು ತೋರಿಸಿದ್ದಾಳೆ. ತಕ್ಷಣ ಆತ ಮಕ್ಕಳ ಸಹಾಯವಾಣಿಗೆ ಫೋನ್ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :