ಗೋಧಿ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಗೋಧಿ ರಫ್ತನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಗೋಧಿ ಉತ್ಪಾದಿಸುವ ಎರಡನೇ ದೇಶವಾಗಿರುವ ಭಾರತದಲ್ಲಿ ಗೋಧಿ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶನಿವಾರ ಈ ಆದೇಶ ಹೊರಡಿಸಿದೆ. ಗೋಧಿ ದರ ಕೆಜಿಗೆ 34ರಿಂದ 35 ರೂ. ತಲುಪಿದ್ದು, 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಜಿಗಿತ ಕಂಡಿದೆ. ಸಾಮಾನ್ಯ ದರಕ್ಕಿಂತ ಶೇ.15ರಿಂದ