ಭಾರೀ ಕುಸಿತದಿಂದ ಉರುಳಿದ ಬಂಡೆಗಳು: 9 ಪ್ರವಾಸಿಗರು ದುರ್ಮರಣ

bengaluru| geethanjali| Last Modified ಭಾನುವಾರ, 25 ಜುಲೈ 2021 (17:54 IST)
ಭೂಕುಸಿತದಿಂದ ದೊಡ್ಡ ದೊಡ್ಡ ಬಂಡೆಗಳು ಸೇತುವೆ ಮೇಲೆ ಉರುಳಿ ಬಿದ್ದ ಪರಿಣಾಮ 9 ಪ್ರವಾಸಿಗರು ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ. ಸಾಂಗ್ಲಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಭೂಕುಸಿತದಿಂದ ಬೆಟ್ಟದ ಮೇಲಿನಿಂದ ನೂರಾರು ದೊಡ್ಡ ಕಲ್ಲುಗಳು ಹಾಗೂ ಬಂಡೆಗಳು ಉರುಳಿಬಿದ್ದಿದ್ದರಿಂದ ಸೇತುವೆ
ಮುರಿದುಬಿದ್ದಿದೆ. ಬಂಡೆಗಳು ಉರುಳಿ ಬೀಳುತ್ತಿರುವ ಭೀಕರ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ವೈರಲ್ ಆಗಿದೆ. 11 ಪ್ರಯಾಣಿಕರಿದ್ದ ಕಾರಿನ ಮೇಲೆ ಬಂಡೆಗಳು ಉರುಳಿಬಿದ್ದಿದ್ದು 9 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.> >


ಇದರಲ್ಲಿ ಇನ್ನಷ್ಟು ಓದಿ :