ಪತ್ನಿಯ ಶೀಲ ಶಂಕಿಸಿ ಪತಿ ಮಾಡಿದ ಕೆಲಸ ನೋಡಿದರೆ ಎದೆ ಝಿಲ್ಲೆನಿಸಬಹುದು!

ಚೆನ್ನೈ| Krishnaveni K| Last Modified ಮಂಗಳವಾರ, 23 ಫೆಬ್ರವರಿ 2021 (09:53 IST)
ಚೆನ್ನೈ: ಪತ್ನಿಯ ಶೀಲಶಂಕಿಸಿದ ವೈದ್ಯ ಮಹಾಶಯನೊಬ್ಬ ಆಕೆಯ ಕುತ್ತಿಗೆ ಸೀಳಿದ್ದಲ್ಲದೆ, ಆಕೆಯ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಹೀನಾಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

 
ವೃತ್ತಿಯಲ್ಲಿ ವೈದ್ಯನಾಗಿರುವ ಆರೋಪಿ ಇದೀಗ ತಲೆಮರೆಸಿಕೊಂಡಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ಪ್ರತ್ಯೇಕವಾಗಿ ತನ್ನ ಪೋಷಕ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದಳು. ಶುಕ್ರವಾರ ಪತ್ನಿಯ ಮನೆಗೆ ತೆರಳಿದ ಆರೋಪಿ ಆಕೆಯ ಜೊತೆ ಜಗಳವಾಡಿ ಕುತ್ತಿಗೆ ಸೀಳಿದ್ದಾನೆ. ಆಕೆಯ ಪೋಷಕರ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಗಾಯಗೊಂಡಿದ್ದ ಆಕೆಯನ್ನು ಬೀದಿಗೆ ಎಳೆದು ತಂದು ರಸ್ತೆಯಲ್ಲಿ ಬಿಸಾಕಿ ಆಕೆಯ ಮೇಲೆ ಕಾರು ಹರಿಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.
ಇದರಲ್ಲಿ ಇನ್ನಷ್ಟು ಓದಿ :